ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭಾರತ-ಆಸೀಸ್ ನಡುವೆ ಮೊದಲ ಏಕದಿನ ಪಂದ್ಯ: ಬ್ಯಾಟಿಂಗ್ ಶುರು ಮಾಡಿದ ಆಸ್ಟ್ರೇಲಿಯಾ

ಸಿಡ್ನಿ(ಆಸ್ಟ್ರೇಲಿಯಾ) ಸುಮಾರು ತಿಂಗಳುಗಳ ಬಳಿಕ ಭಾರತ ತಂಡ ಏಕದಿನ ಮ್ಯಾಚ್ ಗೆ ಅಣಿಯಾಗಿದೆ. ಆಸ್ಟ್ರೇಲಿಯಾ ತಂಡದ ಎದುರಾಳಿಯಾಗಿ ಭಾರತ ಆಡುತ್ತಿದೆ.‌ ಟಾಸ್ ಗೆದ್ದ ಆರೋನ್ ಫಿಂಚ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ‌‌.

ಭಾರತೀಯ ಆಟಗಾರರು 1992ರ ವಿಶ್ವಕಪ್ ವೇಳೆ ಧರಿಸಲಾಗಿದ್ದ ನೆವಿ ಬ್ಲ್ಯೂ ಬಣ್ಣದ ಜೆರ್ಸಿಯಲ್ಲಿ ಆಡುತ್ತಿರುವುದು ಈ ಪಂದ್ಯದ ವಿಶೇಷತೆಯಾಗಿದೆ. ಆಸ್ಟ್ರೇಲಿಯಾದಲ್ಲೇ ನಡೆದ ಅಂದಿನ ವಿಶ್ವಕಪ್ ಪಂದ್ಯದಲ್ಲಿ ಈ ಧಿರಿಸನ್ನು ಪರಿಚಯಿಸಲಾಗಿತ್ತು.

ಕನ್ನಡಿಗ ಮಯಾಂಕ್ ಅಗರ್ವಾಲ್ ಅವರು ಶಿಖರ್ ಧವನ್ ಜೊತೆ ಇನ್ನಿಂಗ್ಸ್ ಆರಂಭಿಸಲಿದ್ದಾರೆ‌. ಈ ಬಾರಿ ಉತ್ತಮ ಪ್ರದರ್ಶನ ನೀಡುವ ಮೂಲಕ ಮಯಾಂಕ್ ಅಗರ್ವಾಲ್ ಭಾರತ ತಂಡದಲ್ಲಿ ತಮ್ಮ ಸ್ಥಾನ ಗಟ್ಟಿ ಮಾಡಿಕೊಳ್ಳುವ ಪ್ರಯತ್ನದಲ್ಲಿದ್ದಾರೆ‌‌.

Edited By : Nagaraj Tulugeri
PublicNext

PublicNext

27/11/2020 10:11 am

Cinque Terre

73.55 K

Cinque Terre

0

ಸಂಬಂಧಿತ ಸುದ್ದಿ