ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸೂರ್ಯಕುಮಾರ್ ಪರ ಬ್ರಿಯಾನ್ ಲಾರಾ ಬ್ಯಾಟಿಂಗ್

ಐಪಿಎಲ್‌ನಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ಮುಂಬೈ ಇಂಡಿಯನ್ಸ್‌ ಆಟಗಾರ ಸೂರ್ಯಕುಮಾರ್ ಯಾದವ್ ಅವರು ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಗೆ ಆಯ್ಕೆಯಾಗಬಹುದು ಎನ್ನಲಾಗಿತ್ತು. ಆದರೆ ಅವರನ್ನು ಟೀಂಇಂಡಿಯಾ ಆಯ್ಕೆ ಸಮಿತಿ ಕೈಬಿಟ್ಟ ಬಗ್ಗೆ ಅನೇಕ ಕ್ರಿಕೆಟ್‌ ಅಭಿಮಾನಿಗಳು ಅಸಮಾಧಾನ ಹೊರ ಹಾಕಿದ್ದಾರೆ. ಇತ್ತ ವೆಸ್ಟ್ ಇಂಡೀಸ್ ಮಾಜಿ ಕ್ರಿಕೆಟರ್‌, ಕ್ರಿಕೆಟ್‌ ದಂತಕಥೆ ಬ್ರಿಯಾನ್ ಲಾರಾ ಕೂಡ ಸೂರ್ಯಕಮಾರ್ ಯಾದವ್ ಪರ ಬ್ಯಾಟಿಂಗ್ ಮಾಡಿದ್ದಾರೆ.

ಈ ಬಗ್ಗೆ ಮಾತನಾಡಿರುವ ಬ್ರಿಯಾನ್ ಲಾರಾ, ''ಸೂರ್ಯಕುಮಾರ್ ಯಾದವ್ ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಆಯ್ಕೆಯಾಗಬೇಕಿತ್ತು. ಅತ್ಯುತ್ತಮ ಬ್ಯಾಟ್ಸ್‌ಮನ್‌ಗೆ ಬೇಕಾದ ಎಲ್ಲಾ ಅರ್ಹತೆಗಳು ಅವರಲ್ಲಿವೆ. ಟೀಂ ಇಂಡಿಯಾ ಪರ ಆಡಲು ಸೂರ್ಯಕುಮಾರ್ ಸಮರ್ಥರಾಗಿದ್ದಾರೆ'' ಎಂದು ಅಭಿಪ್ರಾಯಪಟ್ಟಿದ್ದಾರೆ.

Edited By : Vijay Kumar
PublicNext

PublicNext

23/11/2020 03:08 pm

Cinque Terre

32.08 K

Cinque Terre

1

ಸಂಬಂಧಿತ ಸುದ್ದಿ