ಢಾಕಾ: ಮಾತಾ ಪೂಜೆಯಲ್ಲಿ ಭಾಗಿಯಾಗಿದ್ದಕ್ಕಾಗಿ ಜೀವ ಬೆದರಿಕೆ ಎದುರಿಸಿದ್ದ ಬಾಂಗ್ಲಾದೇಶದ ಕ್ರಿಕೆಟರ್ ಶಕೀಬ್ ಅಲ್ ಹಸನ್ ಈಗ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ.
ಕೋಲ್ಕತ್ತಾದಲ್ಲಿ ಶಕೀಬ್ ಅಲ್ ಹಸನ್ ನಡೆದ ಹಿಂದೂ ದೇವತೆಯ ಆರಾಧನೆಯ ಸಮಾರಂಭದಲ್ಲಿ ಭಾಗಹಿಸಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಬಾಂಗ್ಲಾದೇಶದ ಮುಸ್ಲಿಂ ಮೂಲಭೂತವಾದಿಗಳು ಆಕ್ರೋಶಗೊಂಡಿದ್ದರು. ಮುಸ್ಲಿಮರು ಅನ್ಯ ಧರ್ಮಗಳ ಸಮಾರಂಭಗಳಿಗೆ ಹಾಜರಾಗಬಾರದು ಎಂದು ಹೇಳಿದ್ದರು. ಅಷ್ಟೇ ಅಲ್ಲದೆ ಜೀವ ಬೆದರಿಕೆ ಹಾಕಿದ್ದರು.
ಜೀವ ಬೆದರಿಕೆ ಬೆನ್ನಲ್ಲೇ ಶಕೀಬ್, ''ನಾನು ಕೇವಲ ಎರಡು ನಿಮಿಷಗಳ ಕಾಲ ವೇದಿಕೆಯಲ್ಲಿದ್ದೆ. ಕಾರ್ಯಕ್ರಮವನ್ನು ಉದ್ಘಾಟಿಸಿದ್ದೇನೆ ಎಂದು ಎಲ್ಲರೂ ಭಾವಿಸಿದ್ದಾರೆ. ಆದರೆ ನಾನೊಬ್ಬ ಮುಸ್ಲಿಂ ಆಗಿರುವುದರಿಂದ ಪ್ರಜ್ಞಾಪೂರ್ವಕವಾಗಿಯೇ ಹಾಗೆ ಮಾಡಲು ಸಾಧ್ಯವಿಲ್ಲ. ಬಹುಶಃ ನಾನು ಅಲ್ಲಿಗೆ ಹೋಗಬಾರದಿತ್ತು. ಇದಕ್ಕಾಗಿ ನಾನು ವಿಷಾದಿಸುತ್ತೇನೆ ಮತ್ತು ಕ್ಷಮೆಯಾಚಿಸುತ್ತೇನೆ” ಎಂದು ಹೇಳಿದ್ದಾರೆ.
PublicNext
17/11/2020 05:49 pm