ನವದೆಹಲಿ: 2021ರ ಐಪಿಎಲ್ ಆವೃತ್ತಿಗಾಗಿ ಆಟಗಾರರ ಹರಾಜು ಇದ್ದರೆ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ, ನಾಯಕ ಎಂ.ಎಸ್.ಧೋನಿ ಅವರನ್ನು ತನ್ನಲ್ಲೇ ಉಳಿಸಿಕೊಳ್ಳಬಾರದು ಎಂದು ಟೀಂ ಇಂಡಿಯಾ ಮಾಜಿ ಕ್ರಿಕೆಟರ್ ಆಕಾಶ್ ಚೋಪ್ರಾ ಹೇಳಿದ್ದಾರೆ.
ಈ ವಿಚಾರವಾಗಿ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಲೈವ್ ವಿಡಿಯೋ ಮೂಲಕ ಮಾತನಾಡಿರುವ ಆಕಾಶ್ ಚೋಪ್ರಾ, ''ಸಿಎಸ್‌ಕೆ ಫ್ರಾಂಚೈಸಿ ಎಂ.ಎಸ್.ಧೋನಿ ಅವರನ್ನು ತನ್ನಲ್ಲೇ ಉಳಿಸಿಕೊಂಡರೆ 15 ಕೋಟಿ ರೂ. ಕಳೆದುಕೊಳ್ಳಬೇಕಾಗುತ್ತದೆ. ಅದರ ಬದಲು ಧೋನಿಯನ್ನು ಆಕ್ಷನ್ ಪೂಲ್‌ಗೆ ಇಳಿಸಿ ಮತ್ತೆ ರೈಟ್ ಟು ಮ್ಯಾಚ್ ಕಾರ್ಡ್ ಮುಖಾಂತರ ಮತ್ತೆ ಖರೀದಿಸಬೇಕು'' ಎಂದು ತಿಳಿಸಿದ್ದಾರೆ.
'ಎಂಎಸ್ ಧೋನಿ ಅವರನ್ನು ಮೆಗಾ ಆಕ್ಷನ್‌ಗಾಗಿ ಸಿಎಸ್‌ಕೆ ಬಿಟ್ಟುಕೊಡಬೇಕು. ಮೆಗಾ ಆಕ್ಷನ್ ನಡೆಯುವುದೇ ಹೌದಾದರೆ ನೀವು ಆ ಆಟಗಾರನ ಜೊತೆ ಮೂರು ವರ್ಷಗಳ ಕಾಲ ಇರಬೇಕಾಗುತ್ತದೆ. ಆದರೆ ಎಂಎಸ್‌ಡಿ ನಿಮ್ಮ ಜೊತೆ 3 ವರ್ಷಗಳ ಕಾಲ ಇರುತ್ತಾರಾ? ಅವರನ್ನು ಇಟ್ಟುಕೊಳ್ಳಬೇಡಿ ಅನ್ನುತ್ತಿಲ್ಲ. ಧೋನಿ ಮುಂದಿನ ಐಪಿಎಲ್‌ನಲ್ಲಿ ಆಡಬಹುದು. ಆದರೆ ನೀವು ಅವರನ್ನು ಉಳಿಸಿಕೊಂಡರೆ 15 ಕೋಟಿ ರೂ. ಕಳೆದುಕೊಳ್ಳುವಿರಿ' ಎಂದು ಹೇಳಿದ್ದಾರೆ.
PublicNext
17/11/2020 05:28 pm