ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶೀಘ್ರದಲ್ಲೇ ಭಾರತಕ್ಕೆ ಬರುತ್ತಂತೆ ಪಬ್ ಜೀ

ನವದೆಹಲಿ: ಶೀಘ್ರದಲ್ಲೇ ಪಬ್‍ಜಿ ಮೊಬೈಲ್ ಗೇಮ್ ಭಾರತಕ್ಕೆ ಹೊಸ ಸ್ವರೂಪದಲ್ಲಿ ಬರಲಿದೆ ಎಂದು ಸೌಥ್ ಕೊರಿಯನ್ ಪಬ್‍ಜಿ ಕಾರ್ಪೋರೇಷನ್ ಘೋಷಣೆ ಮಾಡಿದೆ. ಕೇವಲ ಭಾರತದ ಮಾರುಕಟ್ಟೆಗಾಗಿ ಪಬ್‍ಜಿ ಗೇಮ್ ಹೊಸ ಸ್ವರೂಪದಲ್ಲಿ ಬರಲಿದೆ ಎಂದು ಕಂಪನಿ ಘೋಷಿಸಿದೆ. ಜೊತೆಗೆ ಇದರಲ್ಲಿ ಚೀನಾದ ಪಾಲುದಾರಿಕೆ ಇರೋದಿಲ್ಲ ಎಂದು ಸ್ಪಷ್ಟನೆ ನೀಡಿದೆ.

ಪಬ್‍ಜಿ ಕಾರ್ಪೋರೇಷನ್ ನ ಪೇರೆಂಟ್ ಕಂಪನಿ ಕ್ರ್ಯಾಫ್ಟನ್ ಇಂಕ್ ಭಾರತದಲ್ಲಿ 100 ಮಿಲಿಯನ್ ಡಾಲರ್ ಬಂಡವಾಳ ಹೂಡಿಕೆ ಮಾಡುವುದಾಗಿ ಕೂಡ ಘೋಷಿಸಿದೆ. ಕೊರಿಯನ್ ಕಂಪನಿಯೊಂದು ಮೊದಲ ಬಾರಿಗೆ ಭಾರತದಲ್ಲಿ ಇಷ್ಟು ದೊಡ್ಡ ಮೊತ್ತವನ್ನ ಹೂಡಿಕೆ ಮಾಡುತ್ತಿದೆ ಎಂದು ಹೇಳಿದೆ.

ಕೇಂದ್ರ ಸರ್ಕಾರ ಸೈಬರ್ ಸೆಕ್ಯೂರಿಟಿ ಮತ್ತು ದೇಶದ ಹಿತದ ಹಿನ್ನೆಲೆ ಪಬ್‍ಜಿ ಸೇರಿದಂತೆ ಚೀನಾ ಅ್ಯಪ್ ಗಳನ್ನು ನಿಷೇಧಿಸಿತ್ತು. ಇದೀಗ ಕೊರಿಯನ್ ಕಂಪನಿ ಭಾರತಕ್ಕಾಗಿ ಹೊಸ ರೂಪದಲ್ಲಿ ಭದ್ರತೆಗೆ ಧಕ್ಕೆಯಾಗದ ರೀತಿಯಲ್ಲಿ ಪಬ್‍ಜಿ ಗೇಮ್ ಶುರು ಮಾಡಲು ಸಿದ್ಧತೆ ನಡೆಸಿದೆ. ನಿಷೇಧಕ್ಕೊಳಗಾದ ದಿನದಂದೇ ತಾನು ಹಿಂದಿರುಗುವ ಬಗ್ಗೆ ಪಬ್‍ಜಿ ವಿಶ್ವಾಸ ವ್ಯಕ್ತಪಡಿಸಿತ್ತು.

ಭಾರತಕ್ಕೆ ಪಬ್‍ಜಿ ಮೊಬೈಲ್ ಇಂಡಿಯಾ ಹೆಸರಿನಲ್ಲಿ ಹಿಂದಿರುಗಲಿದೆ. ಆದ್ರೆ ಲಾಂಚ್ ಆಗುವ ದಿನವನ್ನ ಕಂಪನಿ ಘೋಷಣೆ ಮಾಡಿಲ್ಲ. ಭಾರತೀಯ ಖಾಸಗಿತನಕ್ಕೆ ಆ್ಯಪ್ ನಿಂದ ಧಕ್ಕೆ ಆಗಲಾರದು ಎಂದು ಪಬ್‍ಜಿ ಸ್ಪಷ್ಟಪಡಿಸಿದೆ.

ವಿಶ್ವದಲ್ಲಿ ಅತಿ ಹೆಚ್ಚು ಡೌನ್‍ಲೋಡ್ ಅಗಿರುವ ಟಾಪ್ 5ರ ಲಿಸ್ಟ್ ನಲ್ಲಿ ಪಬ್‍ಜಿ ಸ್ಥಾನ ಹೊಂದಿದೆ. ಇಡೀ ವಿಶ್ವದಲ್ಲಿ 73 ಕೋಟಿಗೂ ಅಧಿಕ ಜನ ಪಬ್‍ಜಿ ಡೌನ್‍ಲೋಡ್ ಮಾಡಿಕೊಂಡಿದ್ದಾರೆ. ಭಾರತದಲ್ಲಿ 17.5 ಕೋಟಿ ಅಂದರೆ ಶೇ.24ರಷ್ಟು ಬಳಕೆದಾರರನ್ನು ಪಬ್‍ಜಿ ಹೊಂದಿದೆ.

Edited By : Nagaraj Tulugeri
PublicNext

PublicNext

14/11/2020 10:28 pm

Cinque Terre

83.2 K

Cinque Terre

17

ಸಂಬಂಧಿತ ಸುದ್ದಿ