ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ಸೂರ್ಯಕುಮಾರ್ ಯಾದವ್ ಭಾರತದ ಎಬಿ ಡಿವಿಲಿಯರ್ಸ್'

ನವದೆಹಲಿ: ಐಪಿಎಲ್ 2020ರಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ಮುಂಬೈ ಇಂಡಿಯನ್ಸ್ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ ಅವರನ್ನು ಟೀಂ ಇಂಡಿಯಾ ಮಾಜಿ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಹೊಗಳಿದ್ದಾರೆ.

'ಸೂರ್ಯಕುಮಾರ್ ಯಾವದ್ ಭಾರತದ ಎಬಿ ಡಿವಿಲಿಯರ್ಸ್ ಇದ್ದಂತೆ. ಅವರಿಗೆ ಎಲ್ಲಾ ರೀತಿಯ ಹೊಡೆತಗಳನ್ನು ಅವರು ತೋರುತ್ತಾರೆ. ಹೀಗಾಗಿ ಅವರನ್ನು ತಡೆಯುವುದು ಕಷ್ಟ. ಸೂರ್ಯಕುಮಾರ್ ಓವರ್ ಕವರ್‌ಗಳನ್ನು ಹೊಡೆಯುತ್ತಾರೆ, ಸ್ವೀಪ್ ಅನ್ನು ಚೆನ್ನಾಗಿ ಆಡುತ್ತಾನೆ. ಸ್ಪಿನ್ ಹಾಗೂ ವೇಗದ ಬೌಲಿಂಗ್ ಅನ್ನು ಅದ್ಭುತವಾಗಿ ಎದುರಿಸುತ್ತಾರೆ' ಎಂದು ಹರ್ಭಜನ್ ಹೇಳಿದ್ದಾರೆ.

Edited By : Vijay Kumar
PublicNext

PublicNext

12/11/2020 11:20 pm

Cinque Terre

40.8 K

Cinque Terre

3