ನವದೆಹಲಿ: ಟೀಂ ಇಂಡಿಯಾ ಮಾಜಿ ನಾಯಕ ಕಪಿಲ್ ದೇವ್ ಅವರು ಗಾಲ್ಫ್ ಆಟದ ಮೈದಾನಕ್ಕಿಳಿದಿದ್ದಾರೆ.
61 ವರ್ಷದ ಕಪಿಲ್ ದೇವ್ ಅವರು ಅಕ್ಟೋಬರ್‌ನಲ್ಲಿ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಸದ್ಯ ಚೇತರಿಸಿಕೊಂಡಿರುವ ಅವರು ಸ್ವತಃ ಗಾಲ್ಫ್ ಆಡುವ ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ.
"ಗಾಲ್ಫ್ ಕೋರ್ಸ್‌ಗೆ ಹಿಂದಿರುಗಿರುವುದನ್ನು ಎಷ್ಟು ಆನಂದಿಸುತ್ತಿದ್ದೇನೆ ಎಂಬುದನ್ನು ಮಾತುಗಳಲ್ಲಿ ಹೇಳಲು ಸಾಧ್ಯವಿಲ್ಲ. ಮತ್ತೆ ಇಲ್ಲಿಗೆ ಹಿಂದಿರುಗಿರುವುದು ತುಂಬಾ ಖುಷಿ ನೀಡಿದೆ. ಸ್ನೇಹಿತರೊಂದಿಗೆ ಮತ್ತೆ ಸೇರಿದ್ದೇನೆ" ಎಂದು ಹೇಳಿದ್ದಾರೆ.
PublicNext
12/11/2020 06:35 pm