ಕೊರೊನಾ ನಡುವೆಯೂ ಈ ಐಪಿಎಲ್ ಚುಟುಕು ಮಾದರಿ ಕ್ರಿಕೆಟ್ ಪ್ರೇಕ್ಷರಕರನ್ನ ರಂಜಿಸಿದ್ದು ಅಷ್ಟಿಷ್ಟಲ್ಲಾ ಬಿಡಿ, ಆದ್ರೆ ಸತತ ಐದು ಐಪಿಎಲ್ ಟ್ರೋಫಿ ಎತ್ತಿ ಹಿಡಿದ ಮುಂಬೈ ಇಂಡಿಯನ್ಸ್ ತಂಡದ ರೋಹಿತ್ ದಾಖಲೆ ಮೇಲೆ ದಾಖಲೆಗಳೂ ಅಂತಾರಾಷ್ಟ್ರೀಯ ಟಿ-20 ನಾಯಕತ್ವಕ್ಕೆ ಸವಾಲು ನೀಡುತ್ತಿವೆ.
ಹೌದು ! ಈಗಾಗಲೇ ವಿರಾಟ್ ಕೊಹ್ಲಿ ಎಮ್.ಎಸ್.ಧೋನಿ ನಂತರದಲ್ಲಿ ಟೀ ಇಂಡಿಯಾ ನಾಯಕತ್ವ ಮುನ್ನಡೆಸುತ್ತಿದ್ದರೆ ಈದೀಗ ಟಿ-20 ನಾಯಕತ್ವವನ್ನು ರೋಹಿತ್ ಕೈಗೆ ಕೊಡುವಂತೆ ಸ್ಟಾರ್ ಕ್ರಿಕೆಟಿಗ ಗೌತಮ್ ಗಂಭೀರ್ ಹಾಗೂ ವಿರೇಂದ್ರ ಸೆಹ್ವಾಗ್, ಅಷ್ಟೇ ಯಾಕೆ ಇಗ್ಲೇಂಡ್ ಮಾಜಿ ನಾಯಕ ಮೈಕೆಲ್ ವಾನ್ ಸಹ ಧ್ವನಿ ಎತ್ತಿದ್ದಾರೆ.
ಸತತ ಐದು ಬಾರಿ ಐಪಿಎಲ್ ಟ್ರೋಫಿ ಗೆದ್ದಿರುವ ರೋಹಿತ್ ಶರ್ಮಾ ಕೇವಲ ಐಪಿಎಲ್ ಮಾದರಿಯಲ್ಲಾ ಏಕದಿನ, ಟೆಸ್ಟ್, ಅಂತರಾಷ್ಟ್ರೀಯ ಟಿ20 ಯಲ್ಲಿ ಬರೋಬ್ಬರಿ 4 ನಾಲ್ಕು ಬಾರಿ ಶತಕ ಬಾರಿಸಿದ ಏಕೈಕ ಬ್ಯಾಟ್ಸಮನ್, ಏಕದಿನ ಕ್ರಿಕೆಟ್ ಪಂದ್ಯದಲ್ಲೂ ಅತ್ಯಧಿಕ ವೈಯಕ್ತಿಕ ರನ್ (264) ದಾಖಲೆ ಸಹ ರೋಹಿತ್ ಹೆಸರಲ್ಲಿದೆ.
ಕಳೆದ ಒಂದೆರಡು ವರ್ಷದ ಹಿಂದೆ ಭಾರತದಲ್ಲಿ ಟಿ20 ನಾಯಕತ್ವದ ಪೈಪೋಟಿ ನಡೆಯುತ್ತಿದ್ದ ಸಂದರ್ಭದಲ್ಲಿ ಪ್ರತಿ ಬಾರಿ ಟಿ20 ನಾಯಕತ್ವ ವಹಿಸಿದಾಗಲೂ ರೋಹಿತ್ ಯಶಸ್ವಿಯಾಗಿದ್ದು, ನನಗೆ ಧೋನಿ ಇರುವಂತಹ ಶಾಂತ ಸ್ವಭಾವವಿದೆ ನಾಯಕತ್ವ ನಿಭಾಯಿಸಲು ಸಿದ್ಧ ಎಂದಿದ್ದರು.
ಈಗಾಗಲೇ ರೋಹಿತ್ ಕೊಹ್ಲಿ ನಡುವೆ ಅಷ್ಟೇನು ಸಾಮರಸ್ಯ ಇಲ್ಲಾ ಬದಲಾಗಿ ಭಿನ್ನಾಭಿಪ್ರಾಯಗಳಿವೆ ಎಂಬ ಮಾತು ಕ್ರಿಡಾ ವಲಯದಲ್ಲಿದ್ದು ಅನುಭವಿಗಳ ಮಾತಿನಂತೆ ಕೊಹ್ಲಿ ಕೈ ಜಾರಿ ಟಿ20 ನಾಯಕತ್ವ ರೋಹಿತ್ ಹೆಗಲೇರುತ್ತಾ ಯಾರಿಗೋತ್ತು?
PublicNext
12/11/2020 01:23 pm