ದುಬೈ: ಕಿಂಗ್ಸ್ ಇಲೆವೆನ್ ಪಂಜಾಬ್ ಪ್ಲೇ ಆಫ್ ತಲುಪುವಲ್ಲಿ ಎಡವಿತ್ತಾದರೂ ನಾಯಕ ಕೆ.ಎಲ್.ರಾಹುಲ್ ಬ್ಯಾಟಿಂಗ್ ಆರ್ಭಟ ಮಾತ್ರ ಈ ಬಾರಿ ಜೋರಾಗಿತ್ತು. 14 ಪಂದ್ಯಗಳನ್ನು ಆಡಿದ ರಾಹುಲ್ 55.83 ಸರಾಸರಿಯಲ್ಲಿ ಒಟ್ಟು 670 ರನ್ ಬಾರಿಸಿದರು.
ಕೆ.ಎಲ್ ರಾಹುಲ್ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಕಲೆಹಾಕಿ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಂಡಿದ್ದಾರೆ. ರನ್ನರ್ಸ್ ಅಪ್ ಡೆಲ್ಲಿ ಕ್ಯಾಪಿಟಲ್ಸ್ ಓಪನರ್ ಶಿಖರ್ ಧವನ್ 618 ರನ್ ಗಳಿಸಿ ಎರಡನೇ ಸ್ಥಾನದಲ್ಲಿದ್ದಾರೆ. ಧವನ್ ಪಂದ್ಯಾವಳಿಯಲ್ಲಿ ಹೆಚ್ಚು ಶತಕ (ಎರಡು) ಗಳಿಸಿದ ಸಾಧನೆ ಮಾಡಿದ್ದಾರೆ. ಧವನ್ ನಂತರ ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕ ಡೇವಿಡ್ ವಾರ್ನರ್ 548 ರನ್ ಗಳಿಸಿ ಮೂರನೇ ಸ್ಥಾನ, ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಶ್ರೇಯಸ್ ಅಯ್ಯರ್ 519 ರನ್ ನಾಲ್ಕನೇ ಸ್ಥಾನ ಹಾಗೂ ಚಾಂಪಿಯನ್ ಮುಂಬೈ ಇಂಡಿಯನ್ಸ್ ಇಶಾನ್ ಕಿಶನ್ 516 ರನ್ ಗಳಿಸಿ ಐದನೇ ಸ್ಥಾನದಲ್ಲಿದ್ದಾರೆ.
PublicNext
11/11/2020 07:04 pm