ದುಬೈ: ಐಪಿಎಲ್ ಇತಿಹಾಸದಲ್ಲೇ ಅತಿ ಹೆಚ್ಚು ಬಾರಿ ಚಾಂಪಿಯನ್ ಆಗಿರುವ ತಂಡ ಎಂಬ ಹೆಗ್ಗಳಿಕೆ ಮುಂಬೈ ಇಂಡಿಯನ್ಸ್‌ಗೆ ಇದೆ. ಆದರೆ ಇದರೊಂದಿಗೂ ಕೆಟ್ಟ ದಾಖಲೆಗೆ ಗುರಿಯಾಗಿದೆ. ಇಂದು ಈ ಕೆಟ್ಟ ದಾಖಲೆಯನ್ನು ಅಳಿಸಿ ಹಾಕುತ್ತಾ ಎನ್ನುವ ಕುತೂಹಲ ಮೂಡಿಸಿದೆ.
ಮುಂಬೈ ಇಂಡಿಯನ್ಸ್ 2008ರಿಂದ 2012ರ ಆವೃತ್ತಿವರೆಗೂ ಚಾಂಪಿಯನ್ ಪಟ್ಟ ಗಿಟ್ಟಿಸಿಕೊಳ್ಳಲಿಲ್ಲ. ನಂತರ ಅಂದ್ರೆ 2013ರಲ್ಲಿ ಮೊದಲ ಬಾರಿಗೆ ಕಪ್ ಗೆದ್ದು ಬೀಗಿತ್ತು. ಬಳಿಕ 2015, 2017 ಹಾಗೂ ಕಳೆದ ಆವೃತ್ತಿ 2019ರಲ್ಲಿ ಗೆಲುವು ದಾಖಲಿಸಿದೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಮುಂಬೈ ಇದುವರೆಗೂ ಸಮಸಂಖ್ಯೆಯ ವರ್ಷದಲ್ಲಿ ಟ್ರೋಫಿ ಗೆದ್ದೇ ಇಲ್ಲ.
ಪ್ರತಿ ಗೆಲುವಿನ ಮಧ್ಯ ಒಂದು ವರ್ಷ ಅಂತರವಿದೆ. ಹೀಗಾಗಿ ಸಮ ಸಂಖ್ಯೆ ಮತ್ತು ಬೆಸ ಸಂಖ್ಯೆ ಅಂಕಿ ಅಂಶವನ್ನು ತಲೆಕೆಳಗಾಗಿಸಿ ಈ ವರ್ಷ ಮುಂಬೈ ಇಂಡಿಯನ್ಸ್ ಕಪ್ ಗೆಲ್ಲುತ್ತಾ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ. ಇತ್ತ ಚೊಚ್ಚಲ ಟ್ರೋಫಿ ಮೇಲೆ ಕಣ್ಣಿಟ್ಟಿರುವ ಡೆಲ್ಲಿ ಕ್ಯಾಪಿಟಲ್ಸ್ ಇಂದು ಮುಂಬೈ ತಂಡಕ್ಕೆ ಪ್ರಬಲ ಪೈಪೋಟಿ ನೀಡುವ ಸಾಧ್ಯತೆ ಇದೆ.
PublicNext
10/11/2020 05:06 pm