ಅಬುಧಾಬಿ: ಮಾರ್ಕಸ್ ಸ್ಟೊಯಿನಿಸ್ ಅದ್ಬುತ ಆಲ್‌ರೌಡರ್ ಪ್ರದರ್ಶನದಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 17 ರನ್‌ಗಳಿಂದ ಗೆದ್ದು ಬೀಗಿದೆ. ಈ ಮೂಲಕ ಮೊದಲ ಬಾರಿಗೆ ಫೈನಲ್ ಪ್ರವೇಶ ಮಾಡಿದೆ.
ಅಬುಧಾಬಿ ಶೇಕ್ ಝಯೇದ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 13ನೇ ಆವೃತ್ತಿಯ ಕ್ವಾಲಿಫೈಯರ್-2ನೇ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ 190 ರನ್‌ಗಳ ಟಾರ್ಗೆಟ್ ನೀಡಿತ್ತು. ಬಳಿಕ ಗುರಿ ಬೆನ್ನಟ್ಟಿದ ಹೈದರಾಬಾದ್ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 172 ರನ್ ಗಳಿಸಲು ಶಕ್ತವಾಯಿತು.
ಹೈದರಾಬಾದ್ ಪರ ಕೇನ್ ವಿಲಿಯಮ್ಸನ್ 67 ರನ್ (45 ಎಸೆತ, 5 ಬೌಂಡರಿ, 4 ಸಿಕ್ಸರ್) ಗಳಿಸಿದರು. ಆದರೆ ಅವರ ಏಕಾಂಗಿ ಹೋರಾಟವು ಫಲಿಸಲಿಲ್ಲ. ಉಳಿದಂತೆ ನಾಯಕ ಡೇವಿಡ್ ವಾರ್ನರ್ 2 ರನ್, ಪ್ರಿಯಂ ಗರ್ಗ್ 17 ರನ್, ಮನೀಷ್ ಪಾಂಡೆ 21 ರನ್, ಜೇಸನ್ ಹೋಲ್ಡರ್ 11 ರನ್, ಅಬ್ದುಲ್ ಸಮದ್ 33 ರನ್, ರಶೀದ್ ಖಾನ್ 11 ರನ್ ರನ್ ಗಳಿಸಿ ವಿಕೆಟ್ ಕಳೆದುಕೊಂಡರು. ಶ್ರೀವತ್ಸ್ ಗೋಸ್ವಾಮಿ ಯಾವುದೇ ರನ್ ಗಳಿದೆ ವಿಕೆಟ್ ಕಳೆದುಕೊಂಡರೆ, ಕೊನೆಯಲ್ಲಿ ಶಹ್ಬಾಜ್ ನದೀಂ ಅಜೇಯ 2 ರನ್ ಹಾಗೂ ಸಂದೀಪ್ ಶರ್ಮಾ ಅಜೇಯ 2 ರನ್ ಗಳಿಸಿದರು.
ಇದಕ್ಕೂ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಶ್ರೇಯಸ್ ಅಯ್ಯರ್ ಪಡೆಯು 3 ವಿಕೆಟ್ ನಷ್ಟಕ್ಕೆ 189 ರನ್ ಚಚ್ಚಿತ್ತು. ಡೆಲ್ಲಿ ಪರ ಶಿಖರ್ ಧವನ್ 78 ರನ್ (50 ಎಸೆತ, 6 ಬೌಂಡರಿ, 2 ಸಿಕ್ಸರ್), ಶಿಮ್ರೋನ್ ಹೆಟ್ಮೇರ್ ಅಜೇಯ 42 ರನ್ (22 ಎಸೆತ, 4 ಬೌಂಡರಿ, 1 ಸಿಕ್ಸರ್), ಮಾರ್ಕಸ್ ಸ್ಟೊಯಿನಿಸ್ 38 ರನ್ (27 ಎಸೆತ, 5 ಬೌಂಡರಿ, 1 ಸಿಕ್ಸ್), ನಾಯಕ ಶ್ರೇಯಸ್ ಅಯ್ಯರ್ 21 ರನ್ (20 ಎಸೆತ, 1 ಬೌಂಡರಿ) ಹಾಗೂ ರಿಷಭ್ ಪಂತ್ ಅಜೇಯ 2 ರನ್ ದಾಖಲಿಸಿದ್ದರು. ಹೈದರಾಬಾದ್ ಪರ ಜೇಸನ್ ಹೋಲ್ಡರ್, ಸಂದೀಪ್ ಶರ್ಮಾ, ರಶೀದ್ ಖಾನ್ ತಲಾ ಒಂದು ವಿಕೆಟ್ ಪಡೆದರು.
PublicNext
08/11/2020 11:25 pm