ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಬ್ಬರಿಸಿದ ಧವನ್, ಹೆಟ್ಮೇರ್: ಹೈದರಾಬಾದ್‌ಗೆ 190 ರನ್‌ಗಳ ಗುರಿ

ಅಬುಧಾಬಿ: ಅನುಭವಿ ಬ್ಯಾಟ್ಸ್‌ಮನ್ ಶಿಖರ್ ಧವನ್ ಹಾಗೂ ಶಿಮ್ರೋನ್ ಹೆಟ್ಮೇರ್ ಅಬ್ಬರ ಬ್ಯಾಟಿಂಗ್‌ನಿಂದ ಡೆಲ್ಲಿ ಕ್ಯಾಪಿಟಲ್ಸ್‌ ತಂಡವು ಸನ್‌ರೈಸರ್ಸ್ ಹೈದರಾಬಾದ್‌ಗೆ 190 ರನ್‌ಗಳ ಬೃಹತ್‌ ಮೊತ್ತದ ಗುರಿ ನೀಡಿದೆ.

ಅಬುಧಾಬಿ ಶೇಕ್ ಝಯೇದ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್ 13ನೇ ಆವೃತ್ತಿಯ ಕ್ವಾಲಿಫೈಯರ್-2ನೇ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಬ್ಯಾಟಿಂಗ್‌ ಆಯ್ದುಕೊಂಡಿತು. ಆಯ್ಕೆಯನ್ನು ಸಮರ್ಥಿಸಿಕೊಂಡ ಶ್ರೇಯಸ್‌ ಅಯ್ಯರ್‌ ಪಡೆಯು 3 ವಿಕೆಟ್‌ ನಷ್ಟಕ್ಕೆ 189 ರನ್‌ ಚಚ್ಚಿದೆ.

ಡೆಲ್ಲಿ ಪರ ಶಿಖರ್ ಧವನ್ 78 ರನ್ (50 ಎಸೆತ, 6 ಬೌಂಡರಿ, 2 ಸಿಕ್ಸರ್), ಶಿಮ್ರೋನ್ ಹೆಟ್ಮೇರ್ ಅಜೇಯ 42 ರನ್ (22 ಎಸೆತ, 4 ಬೌಂಡರಿ, 1 ಸಿಕ್ಸರ್), ಮಾರ್ಕಸ್ ಸ್ಟೊಯಿನಿಸ್ 38 ರನ್ (27 ಎಸೆತ, 5 ಬೌಂಡರಿ, 1 ಸಿಕ್ಸ್‌), ನಾಯಕ ಶ್ರೇಯಸ್ ಅಯ್ಯರ್ 21 ರನ್ (20 ಎಸೆತ, 1 ಬೌಂಡರಿ) ಹಾಗೂ ರಿಷಭ್ ಪಂತ್ ಅಜೇಯ 2 ರನ್ ದಾಖಲಿಸಿದರು. ಹೈದರಾಬಾದ್‌ ಪರ ಜೇಸನ್ ಹೋಲ್ಡರ್, ಸಂದೀಪ್ ಶರ್ಮಾ, ರಶೀದ್ ಖಾನ್ ತಲಾ ಒಂದು ವಿಕೆಟ್‌ ಪಡೆದರು.

Edited By : Vijay Kumar
PublicNext

PublicNext

08/11/2020 09:22 pm

Cinque Terre

74.61 K

Cinque Terre

6