ಅಬುಧಾಬಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹತ್ವದ ಪಂದ್ಯದಲ್ಲೂ ಬ್ಯಾಟಿಂಗ್ ವೈಫಲ್ಯ ತೋರಿ ಸನ್ರೈಸರ್ಸ್ ಹೈದರಾಬಾದ್ ತಂಡಕ್ಕೆ 132 ರನ್‌ಗಳ ಸಾಧಾರಣ ಮೊತ್ತದ ಗುರಿ ನೀಡಿದೆ.
ಅಬುಧಾಬಿಯ ಶೇಖ್ ಝಯೇದ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್ 2020ರ ಎಲಿಮಿನೇಟರ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕೊಹ್ಲಿ ಪಡೆ 7 ವಿಕೆಟ್ ನಷ್ಟಕ್ಕೆ 131 ರನ್ ಗಳಿಸಲು ಶಕ್ತವಾಯಿತು.
ಆರ್‌ಸಿಬಿ ಪರ ಎಬಿ ಡಿವಿಲಿಯರ್ಸ್ 56 ರನ್ ಹಾಗೂ ಆ್ಯರೋನ್ ಫಿಂಚ್ 32 ರನ್ ದಾಖಲಿಸಿದರು. ಉಳಿದಂತೆ ದೇವದತ್ ಪಡಿಕ್ಕಲ್ 1 ರನ್, ನಾಯಕ ವಿರಾಟ್ ಕೊಹ್ಲಿ 6 ರನ್, ಶಿವಂ ದುಬೆ 8 ರನ್, ವಾಷಿಂಗ್ಟನ್ ಸುಂದರ್ 5 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಮೊಯೀನ್ ಅಲಿ ಮೊದಲ ಎಸೆತದಲ್ಲೇ ವಿಕೆಟ್ ಕಳೆದುಕೊಂಡರೆ, ಕೊನೆಯಲ್ಲಿ ನವ್ದೀಪ್ ಸೈನಿ ಅಜೇಯ 9 ರನ್ ಮತ್ತು ಮೊಹಮ್ಮದ್ ಸಿರಾಜ್ ಅಜೇಯ 10 ರನ್‌ಗಳ ಕೊಡುಗೆ ನೀಡಿದರು.
ಹೈದರಾಬಾದ್ ಪರ ಜೇಸನ್ ಹೋಲ್ಡರ್ ಪ್ರಮುಖ 3 ವಿಕೆಟ್ ಕಿತ್ತು ಮಿಂಚಿದರೆ, ಟಿ. ನಟರಾಜನ್ 2 ವಿಕೆಟ್, ಶಹ್ಬಾಜ್ ನದೀಂ 1 ವಿಕೆಟ್ ಕಬಳಿಸಿ ತಂಡಕ್ಕೆ ಆಸರೆಯಾದರು.
PublicNext
06/11/2020 09:27 pm