ದುಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್‌ನ ಬ್ಯಾಟ್ಸ್‌ಮನ್ ಮನೀಷ್ ಪಾಂಡೆ ವಿಶೇಷ ಸಾಧನೆಗೆ ಪಾತ್ರರಾಗಲಿದ್ದಾರೆ.
ಆರ್ ಸಿಬಿ ವಿರುದ್ಧದ ಪಂದ್ಯದಲ್ಲಿ ಮನೀಷ್ ಪಾಂಡೆ ಒಂದು ವೇಳೆ 20 ರನ್ ಬಾರಿಸಿದರೆ ಈ ಐಪಿಎಲ್‌ನಲ್ಲಿ 400 ರನ್ ಬಾರಿಸಿದ 4ನೇ ಕರ್ನಾಟಕ ಬ್ಯಾಟ್ಸ್‌ಮನ್ ಆಗಿ ಗುರುತಿಸಿಕೊಳ್ಳಲಿದ್ದಾರೆ. ಒಟ್ಟು 13 ಇನ್ನಿಂಗ್ಸ್‌ಗಳನ್ನಾಡಿರುವ ಮನೀಷ್ ಪಾಂಡೆ 34.55ರ ಸರಾಸರಿಯಲ್ಲಿ 380 ರನ್ ಬಾರಿಸಿದ್ದಾರೆ. ಇನ್ನು 20 ರನ್ ಬಂದರೆ 400 ರನ್ ಪೂರ್ಣಗೊಳ್ಳಲಿದೆ.
ಕೆ.ಎಲ್.ರಾಹುಲ್ (670 ರನ್), ಮಯಾಂಕ್ ಅಗರ್ವಾಲ್ (424 ರನ್), ದೇವದತ್ ಪಡಿಕ್ಕಲ್ (472 ರನ್) ಈ ಸಾಲಿನಲ್ಲಿದ್ದಾರೆ. ಮನೀಷ್ ಕೂಡ ಸಾಧನೆ ಪಟ್ಟಿ ಸೇರಿಕೊಳ್ಳುವ ನಿರೀಕ್ಷೆಯಿದೆ.
PublicNext
06/11/2020 02:32 pm