ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಳಪೆ ಪ್ರದರ್ಶನ : CSK ತಂಡದಿಂದ 3 ಆಟಗಾರರು ಔಟ್?

ಚೆನ್ನೈ : 2020 ಐಪಿಎಲ್ ನಲ್ಲಿ ಕಳಪೆ ಪ್ರದರ್ಶನ ನೀಡಿದ ಚೆನ್ನೈ ತಂಡದ ಮೂವರು ಆಟಗಾರನ್ನು ಕೈ ಬಿಡುವ ಸಾಧ್ಯತೆ ಹೆಚ್ಚಿವೆ.

2008 ರಿಂದ ಆರಂಭಗೊಂಡ ಐಪಿಎಲ್ನಲ್ಲಿ ಚೆನ್ನೈ ತಂಡ ಪ್ರತಿ ಆವೃತ್ತಿಯಲ್ಲಿ ಪ್ಲೇ ಆಫ್ ಪ್ರವೇಶಿಸುತ್ತಿತ್ತು. ಆದರೆ ಇದೇ ಮೊದಲ ಬಾರಿಗೆ ಪ್ಲೇ ಆಫ್ ಪ್ರವೇಶಿಸದೇ 7ನೇ ಸ್ಥಾನ ಪಡೆದು ಟೂರ್ನಿಯಿಂದ ಹೊರ ಬಿದ್ದಿದೆ.

ಈ ಬಾರಿಯ ಕಳಪೆ ಪ್ರದರ್ಶನಕ್ಕೆ ಬ್ಯಾಟಿಂಗ್, ಬೌಲಿಂಗ್ ವೈಫಲ್ಯ ಎದ್ದು ಕಾಣುತ್ತಿರುವ ಹಿನ್ನೆಲೆಯಲ್ಲಿ ಖ್ಯಾತ ಬ್ಯಾಟ್ಸ್ ಮನ್ ಮತ್ತು ಬೌಲರ್ ಗಳನ್ನು ಕೈ ಬಿಡಲು ಚೆನ್ನೈ ತಂಡ ಚಿಂತನೆ ನಡೆಸಿದೆ.

ಅದರಲ್ಲೂ ಮುಖ್ಯವಾಗಿ ಆಸ್ಟ್ರೇಲಿಯಾದ ಶೇನ್ ವಾಟ್ಸನ್, ಕೇದಾರ್ ಜಾಧವ್, ಪಿಯೂಶ್ ಚಾವ್ಲಾ ಅವರನ್ನು ಕೈ ಬಿಡುವ ಸಾಧ್ಯತೆ ತುಸು ಹೆಚ್ಚಿದೆ.

ಶೇನ್ ವಾಟ್ಸನ್:

ಆರ್ ಸಿಬಿ ಪರ ಆಡಿದ್ದ ವಾಟ್ಸನ್ 2018ರಲ್ಲಿ ಚೆನ್ನೈ ಪರ ಆಡಲು ಆರಂಭಿಸಿದ್ದರು. ಚೆನ್ನೈ 4 ಕೋಟಿ ರೂ. ನೀಡಿ ವಾಟ್ಸನ್ ಅವರನ್ನು ಖರೀದಿಸಿತ್ತು.

2018 ರಲ್ಲಿ 15 ಪಂದ್ಯಗಳಿಂದ 555 ರನ್, 2019 ರಲ್ಲಿ 17 ಪಂದ್ಯಗಳಿಂದ 398 ರನ್ ಹೊಡೆದಿದ್ದ ವಾಟ್ಸನ್ ಈ ಬಾರಿಯ 11 ಪಂದ್ಯ ಮಾತ್ರ ಆಡಿದ್ದರು.

247 ಬಾಲ್ ಎದುರಿಸಿದ್ದ ವಾಟ್ಸನ್ 29.90 ಸರಾಸರಿಯಲ್ಲಿ 299 ರನ್ ಮಾತ್ರ ಹೊಡೆದಿದ್ದರು.

ಪಿಯೂಶ್ ಚಾವ್ಲಾ:

2008ರಲ್ಲಿ ರಾಜಸ್ಥಾನ ರಾಯಲ್ಸ್ ನಂತರ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆಡಿದ್ದ ಪಿಯೂಶ್ ಚಾವ್ಲಾರನ್ನು 2020ರ ಹರಾಜಿನಲ್ಲಿ ಚೆನ್ನೈ ತಂಡ 6.75 ಕೋಟಿ ರೂ. ನೀಡಿ ಖರೀದಿಸಿತ್ತು.

ಈ ಬಾರಿ ಒಟ್ಟು 126 ಬಾಲ್ ಎಸೆದಿದ್ದು 191 ರನ್ ನೀಡಿ 6 ವಿಕೆಟ್ ಪಡೆದಿದ್ದರು.

ಕೇದಾರ್ ಜಾಧವ್:

ಡೆಲ್ಲಿ ಡೇರ್ ಡೆವಿಲ್ಸ್ , ಕೊಚ್ಚಿ ಟಸ್ಕರ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪರ ಆಡಿದ್ದ ಕೇದಾರ್ ಜಾಧವ್ ಅವರನ್ನು ಚೆನ್ನೈ ತಂಡ 2018ರಲ್ಲಿ 7.8 ಕೋಟಿ ರೂ. ನೀಡಿ ಖರೀದಿಸಿತ್ತು.

ಈ ವರ್ಷ 8 ಪಂದ್ಯವಾಡಿದ್ದ ಜಾಧವ್ 62 ರನ್ ಮತ್ರ ಹೊಡೆದಿದ್ದರು. 2019ರಲ್ಲಿ 14 ಪಂದ್ಯಗಳಿಂದ 162 ರನ್ ಹೊಡೆದಿದ್ದರು.

Edited By : Nirmala Aralikatti
PublicNext

PublicNext

03/11/2020 12:24 pm

Cinque Terre

55.88 K

Cinque Terre

2

ಸಂಬಂಧಿತ ಸುದ್ದಿ