ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧವನ್, ರಹಾನೆ ಅಬ್ಬರ- ಆರ್‌ಸಿಬಿ ವಿರುದ್ಧ 6 ವಿಕೆಟ್‌ನಿಂದ ಗೆದ್ದು ಪ್ಲೇ ಆಫ್‌ಗೆ ಎಂಟ್ರಿ ಕೊಟ್ಟ ಡೆಲ್ಲಿ

ಅಬುಧಾಬಿ: ಅನುಭವಿ ಬ್ಯಾಟ್ಸ್‌ಮನ್ ಶಿಖರ್ ಧವನ್ ಹಾಗೂ ಅಜಿಂಕ್ಯಾ ರಹಾನೆ ಅಬ್ಬರದಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 6 ವಿಕೆಟ್‌ಗಳಿಂದ ಗೆದ್ದು ಪ್ಲೇ ಆಫ್‌ಗೆ ಎಂಟ್ರಿ ಕೊಟ್ಟಿದೆ.

ಅಬುಧಾಬಿ ಶೇಕ್ ಝಯೇದ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್​ನ 55ನೇ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೋಹ್ಲಿ ಪಡೆ 152 ರನ್‌ ದಾಖಲಿಸಿತ್ತು. ಈ ಸಾಧಾರಣ ಮೊತ್ತರ ಟಾರ್ಗೆಟ್ ಬೆನ್ನಟ್ಟಿದ ಡೆಲ್ಲಿ 19 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 154 ರನ್‌ ಚಚ್ಚಿ ಗೆದ್ದು ಬೀಗಿದೆ.

ಡೆಲ್ಲಿ ಪರ ಶಿಖರ್ ಧವನ್ 54 ರನ್ (41 ಎಸೆತ, 6 ಬೌಂಡರಿ), ಅಜಿಂಕ್ಯಾ ರಹಾನೆ 46 ರನ್ (46 ಎಸೆತ, 5 ಬೌಂಡರಿ, 1 ಸಿಕ್ಸ್) ಸಿಡಿಸಿದರು. ಆದರೆ ಮಹತ್ವದ ಪಂದ್ಯದಲ್ಲಿ ನಾಯಕ ಶ್ರೇಯಸ್ ಅಯ್ಯರ 7 ರನ್‌ಗೆ ವಿಕೆಟ್‌ ಒಪ್ಪಿಸಿದರೆ, ಪೃಥ್ವಿ ಶಾ 9 ರನ್ ಗಳಿಸಲು ಶಕ್ತರಾದರು. ಕೊನೆಯಲ್ಲಿ ರಿಷಬ್ ಪಂತ್ 8 ರನ್ ಹಾಗೂ ಮಾರ್ಕಸ್ ಸ್ಟೋನಿಸ್ 10 ರನ್ ಚಚ್ಚಿದರು ತಂಡಕ್ಕೆ ಜಯ ತಂಡುಕೊಟ್ಟರು.

ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್ ಮಾಡಿದ್ದ ಆರ್‌ಸಿಬಿ ಆರ್‌ಸಿಬಿ ಪರ ಕನ್ನಡಿಗ ದೇವದತ್ ಪಡಿಕ್ಕಲ್ 50 ರನ್ (41 ಎಸೆತ, 5 ಬೌಂಡರಿ), ಎಬಿ ಡಿವಿಲಿಯರ್ಸ್ 35 ರನ್ (21 ಎಸೆತ , 1 ಬೌಂಡರಿ, 2 ಸಿಕ್ಸರ್), ನಾಯಕ ವಿರಾಟ್ ಕೊಹ್ಲಿ 29 ರನ್ (24 ಎಸೆತ, 2 ಬೌಂಡರಿ, 1 ಸಿಕ್ಸ್), ಸಹಾಯದಿಂದ 7 ವಿಕೆಟ್ ನಷ್ಟಕ್ಕೆ 152 ರನ್ ಪೇರಿಸಿದ್ದರು.

Edited By : Vijay Kumar
PublicNext

PublicNext

02/11/2020 10:59 pm

Cinque Terre

71.54 K

Cinque Terre

13

ಸಂಬಂಧಿತ ಸುದ್ದಿ