ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಚಿತ್ರ ಕಾರಣಕ್ಕಾಗಿ ಕಾಂಡೋಮ್ ಬಳಸಿದ WWE ಲೆಜೆಂಡ್ ಮಿಚೆಲ್ ಮೆಕೂಲ್

ವಾಷಿಂಗ್ಟನ್: ಡಬ್ಲ್ಯೂಡಬ್ಲ್ಯೂಇ ಲೆಜೆಂಡ್ ಮಿಚೆಲ್ ಮೆಕೂಲ್ ಇತ್ತೀಚೆಗೆ ಕೆಲವು ವಿಚಿತ್ರ ಕಾರಣಕ್ಕಾಗಿ ಇದೇ ಮೊದಲ ಬಾರಿ ಕಾಂಡೋಮ್ ಬಳಸಿ ಸುದ್ದಿಯಾಗಿದ್ದಾರೆ.

ಅಮೆರಿಕದ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಈ ಮಧ್ಯೆ ಮಿಚೆಲ್ ಮೆಕೂಲ್ ಮತದಾನ ಮಾಡಲು ತನ್ನ ಬೆರಳಿಗೆ ರಕ್ಷಣೆ ಅಗತ್ಯವಿದೆ ಎಂದು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಬಲಗೈ ತೋರು ಬೆರಳಿಗೆ ಕಾಂಡೋಮ್ ಹಾಕಿಕೊಂಡ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

"ನಾನು ಮೊದಲ ಬಾರಿಗೆ ಕಾಂಡೋಮ್ ಬಳಸಿದ್ದೇನೆ. 2020ರ ಚುನಾವಣೆಯಲ್ಲಿ ಮತ ಹಾಕುವುದು ಅತ್ಯಂತ ಮುಖ್ಯ ವಿಷಯವಾಗಿದೆ. ಈ ಹಿನ್ನೆಲೆಯಲ್ಲಿ ಬೆರಳಿಗೆ ಕಾಂಡೋಮ್ ಹಾಕಿರುವೆ. ನಾನು ಮದುವೆಯಾಗುವವರೆಗೂ ಸಂಭೋಗಕ್ಕಾಗಿ ಕಾಯುತ್ತಿದ್ದೆ' ಎಂದು ಹೇಳಿರುವ ಮಿಚೆಲ್ ಮೆಕೂಲ್, ಈಗ ಪಕ್ಷವನ್ನು ಲೆಕ್ಕಿಸದೆ, ನಿಮ್ಮ ಹಕ್ಕನ್ನು ಚಲಾಯಿಸಿ ಎಂದು ಕರೆ ಕೊಟ್ಟಿದ್ದಾರೆ.

Edited By : Vijay Kumar
PublicNext

PublicNext

02/11/2020 05:10 pm

Cinque Terre

46.82 K

Cinque Terre

0

ಸಂಬಂಧಿತ ಸುದ್ದಿ