ರಾಯಚೂರು: ಐಪಿಎಲ್ ಹಂಗಾಮಿನಲ್ಲಿ ಎಲ್ಲ ತಂಡಗಳ ಅಭಿಮಾನಿಗಳು ಒಂದು ಕಡೆಯಾದ್ರೆ ಆರ್ ಸಿ ಬಿ ಫ್ಯಾನ್ಸ್ ಗಳದ್ದೇ ಒಂದು ತೂಕ.
ಅದೇಷ್ಟು ಬಾರಿ ಅಭಿಮಾನಿಗಳ ಆಸೆಗೆ ಆರ್ ಸಿ ಬಿ ಪ್ಲೇಯರ್ಸ್ ತಣ್ಣೀರೆರಚಿದ್ರು ಅಭಿಮಾನಿಗಳು ಮಾತ್ರ ತಂಡಕ್ಕೆ ತಾವು ತೋರುವ ಪ್ರೀತಿಯಲ್ಲಿ ಕೊಂಚ ಬದಲಾವಣೆಯನ್ನು ಮಾಡಿಕೊಂಡಿಲ್ಲ.
ಸೋತರು ಗೆದ್ದರು ಆರ್ ಸಿ ಬಿಯನ್ನಾ ಪ್ರೀತಿಸುತ್ತಲೇ ಇದ್ದಾರೆ.
ಸದ್ಯ 2020 ಐಪಿಎಲ್ ನಲ್ಲಿ ಕೊನೇ ಪಂದ್ಯ ಆಡಲು ಸಜ್ಜಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಅಭಿಮಾನಿಗಳು ಪ್ರಾರ್ಥನೆ ಸಲ್ಲಿಸಿದ್ದು, ಗೆಲುವಿಗಾಗಿ ದೇವರಿಗೆ ರುದ್ರಾಭಿಷೇಕವನ್ನೂ ಮಾಡಿಸಿದ್ದಾರೆ.
ಆರ್ಸಿಬಿ ತಂಡ ನಿರ್ಣಾಯಕ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೆಣಸಾಡಲಿದ್ದು, ಗೆದ್ದರೆ ಪ್ಲೇ-ಆಫ್ ಸ್ಥಾನ ಖಚಿತವಾಗಲಿದೆ.
ಇಂದು (ಸೋಮವಾರ) ಸಂಜೆ 7.30ಕ್ಕೆ ಆರಂಭವಾಗಲಿದ್ದು, ಕೊಹ್ಲಿ ಟೀಂ ಗೆಲುವಿಗಾಗಿ ಆರ್ ಸಿಬಿ ಅಭಿಮಾನಿಗಳು ಲಿಂಗಸುಗೂರು ತಾಲೂಕಿನ ಗುರುಗುಂಟಾ ಶ್ರೀ ಅಮರೇಶ್ವರ ದೇವಾಲಯದಲ್ಲಿ ರುದ್ರಾಭಿಷೇಕ ನೆರವೇರಿಸಿದ್ದಾರೆ.
ವಿಶೇಷ ಪ್ರಾರ್ಥನೆ ಸಲ್ಲಿಸಿ ರುದ್ರಾಭಿಷೆಕದ ರಶೀದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ಸೋಲಿನ ನಡುವೆಯೂ ಆರ್ಸಿಬಿ ಅಂಕಪಟ್ಟಿಯಲ್ಲಿ 2ನೇ ಸ್ಥಾನ ಉಳಿಸಿಕೊಂಡಿದೆ. ಇಂದಿನ ಪಂದ್ಯ ಆರ್ ಸಿ ಬಿ ಗೆ ಪ್ಲೇಆಫ್ ಹಂತದ ನಿರ್ಣಾಯಕ ಪಂದ್ಯವಾಗಿದ್ದು, ವಿರಾಟ್ ಕೊಹ್ಲಿ ಬಳಗ ಗೆಲುವು ಸಾಧಿಸಲೇಬೇಕೆಂದು ಅಭಿಮಾನಿಗಳು ದೇವರ ಮೊರೆಹೋಗಿದ್ದಾರೆ.
PublicNext
02/11/2020 03:46 pm