ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶೂನ್ಯಕ್ಕೆ ಮೂವರು ಔಟ್‌, ಅಬ್ಬರಿಸಿದ ನಾಯಕ ಮಾರ್ಗನ್: ರಾಜಸ್ಥಾನ್‌ಗೆ 192 ರನ್‌ಗಳ ಗುರಿ

ದುಬೈ: ನಾಯಕ ಇಯಾನ್ ಮಾರ್ಗನ್ ಅಬ್ಬರದ ಅರ್ಧಶತಕದಿಂದ ಕೋಲ್ಕತ್ತಾ ನೈಟ್‌ರೈಡರ್ಸ್ ತಂಡವು ರಾಜಸ್ಥಾನ್ ರಾಯಲ್ಸ್‌ಗೆ 192 ರನ್‌ಗಳ ಗುರಿ ನೀಡಿದೆ.

ದುಬೈನಲ್ಲಿ ನಡೆಯುತ್ತಿರುವ ಐಪಿಎಲ್ 13ನೇ ಆವೃತ್ತಿಯ 54ನೇ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ 7 ವಿಕೆಟ್‌ ನಷ್ಟಕ್ಕೆ 191 ರನ್‌ ಚಚ್ಚಿದೆ. ಕೋಲ್ಕತ್ತಾ ಪರ ನಾಯಕ ಇಯಾನ್ ಮಾರ್ಗನ್ ಅಜೇಯ 68 ರನ್ (35 ಎಸೆತ, 5 ಬೌಂಡರಿ, 6 ಸಿಕ್ಸರ್), ರಾಹುಲ್ ತ್ರಿಪಾಠಿ 39 ರನ್, ಶುಭ್​ಮನ್ ಗಿಲ್ 36 ರನ್, ಆಂಡ್ರೆ ರಸೆಲ್ 25 ರನ್ ಗಳಿಸಿದರು.

ಈ ಪಂದ್ಯದಲ್ಲೂ ಬ್ಯಾಟಿಂಗ್ ವೈಫಲ್ಯ ತೋರಿದ ದಿನೇಶ್ ಕಾರ್ತಿಕ್ ಯಾವುದೇ ರನ್‌ ಗಳಿಸಲಿಲ್ಲ. ಅಷ್ಟೇ ಅಲ್ಲದೆ ನಿತೀಶ್ ರಾಣಾ ಹಾಗೂ ಸುನಿಲ್ ನಾರಾಯಣ್ ಶೂನ್ಯಕ್ಕೆ ವಿಕೆಟ್‌ ಒಪ್ಪಿಸಿದರು.

Edited By : Vijay Kumar
PublicNext

PublicNext

01/11/2020 09:19 pm

Cinque Terre

55.74 K

Cinque Terre

3

ಸಂಬಂಧಿತ ಸುದ್ದಿ