ಅಬುಧಾಬಿ: ಋತುರಾಜ್ ಗಾಯಕ್ವಾಡ್, ಫಾಫ್ ಡುಪ್ಲೆಸಿಸ್ ಹಾಗೂ ಅಂಬಾಟಿ ರಾಯುಡು ಅಬ್ಬರ ಬ್ಯಾಟಿಂಗ್‌ನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ 9 ವಿಕೆಟ್‌ಗಳಿಂದ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಪಂಜಾಬ್ ಪ್ಲೇ ಆಫ್ ಎಂಟ್ರಿ ಕನಸಿಗೆ ಬ್ರೇಕ್ ಬಿದ್ದಿದೆ.
ಅಬುಧಾಬಿ ಶೇಕ್ ಝಯೇದ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ನ 53ನೇ ಪಂದ್ಯದಲ್ಲಿ ಪಂಜಾಬ್ 153 ರನ್‌ಗಳ ಟಾರ್ಗೆಟ್ ನೀಡಿತ್ತು. ಈ ಗುರಿ ಬೆನ್ನಟ್ಟಿದ ಧೋನಿ ಬಾಯ್ಸ್ 7 ಎಸೆತಗಳು ಬಾಕಿ ಇರುವಂತೆ ಒಂದು ವಿಕೆಟ್ ನಷ್ಟಕ್ಕೆ 154 ರನ್ ಚಚ್ಚಿ ಗೆದ್ದು ಬೀಗಿದರು. ಚೆನ್ನೈ ಪರ ಋತುರಾಜ್ ಗಾಯಕ್ವಾಡ್ ಅಜೇಯ 62 ರನ್, ಫಾಫ್ ಡುಪ್ಲೆಸಿಸ್ 48 ರನ್ ಹಾಗೂ ಅಂಬಾಟಿ ರಾಯುಡು ಅಜೇಯ 30 ರನ್ ದಾಖಲಿಸಿದರು.
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ್ದ ಪಂಜಾಬ್ ತಂಡವು ದೀಪಕ್ ಹೂಡ 62 ರನ್ (30 ಎಸೆತ, 3 ಬೌಂಡಿ, 2 ಸಿಕ್ಸರ್), ಕೆಎಲ್ ರಾಹುಲ್ 29 ರನ್ ಹಾಗೂ ಮಯಾಂಕ್ ಅಗರ್ವಾಲ್ 26 ರನ್ ಸಹಾಯದಿಂದ 6 ವಿಕೆಟ್ ನಷ್ಟಕ್ಕೆ 153 ರನ್ ಪೇರಿಸಿತ್ತು
PublicNext
01/11/2020 07:12 pm