ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

IPL 2020 : ಇಂದು 3 ತಂಡಕ್ಕೆ ನಿರ್ಣಾಯಕ ಪಂದ್ಯ : ಜಯದ ಲಯಕ್ಕೆ ಮರಳುವವರಾರು?

ಅಬುಧಾಬಿ : ಐಪಿಎಲ್ 2020 ಸರಣಿ ಶುರುವಾಗಿದೆ ಇಂದು ರವಿವಾರ ಎರಡು ಐಪಿಎಲ್ ಪಂದ್ಯಗಳಲ್ಲಿ ಮೂರು ತಂಡಗಳ ಪ್ಲೇ ಆಫ್ ಭವಿಷ್ಯ ನಿರ್ಧಾರವಾಗಲಿದೆ.

ಮೊದಲ ಪಂದ್ಯದಲ್ಲಿ ಚೆನ್ನೈ ಮತ್ತು ಪಂಜಾಬ್ ಮುಖಾಮುಖೀಯಾಗಲಿವೆ.

ರಾತ್ರಿ ಕೋಲ್ಕತಾ-ರಾಜಸ್ಥಾನ್ ಸೆಣಸಲಿವೆ. ಈ ನಾಲ್ಕೂ ತಂಡಗಳಿಗೆ ಇದು ಕೊನೆಯ ಲೀಗ್ ಪಂದ್ಯವಾಗಿರುವುದರಿಂದ ಸ್ಪರ್ಧೆ ತೀವ್ರ ಕುತೂಹಲ ಮೂಡಿಸಿದೆ.

ಕೆಕೆಆರ್, ಪಂಜಾಬ್, ರಾಜಸ್ಥಾನ್ ತಲಾ 12 ಅಂಕ ಹೊಂದಿವೆ. ಆದರೆ ಈ ಪಂದ್ಯದಲ್ಲಿ ಕೇವಲ ಗೆದ್ದರಷ್ಟೇ ಸಾಲದು, ಜತೆಗೆ ರನ್ ರೇಟ್ ಕೂಟ ಉತ್ತಮವಾಗಿರಬೇಕು.

ಮೊದಲ ಪಂದ್ಯದಲ್ಲಿ ಚೆನ್ನೈ ವಿರುದ್ಧ ಪಂಜಾಬ್ ಎಡವಿದರೆ ಕೂಟದಿಂದ ನಿರ್ಗಮಿಸಲಿದೆ.

ಆದರೆ ಇದರಿಂದ ಧೋನಿ ಪಡೆಗೆ ಯಾವುದೇ ಲಾಭವಾಗದು. ಅದು ಈಗಾಗಲೇ ನಿರ್ಗಮಿಸಿದೆ.

ಆದರೆ ಗೆದ್ದ ಪಂಜಾಬನ್ನು ಹೊರದಬ್ಬಿದ ಹೆಗ್ಗಳಿಕೆಗೆ ಪಾತ್ರವಾಗಲಿದೆ.

Edited By : Nirmala Aralikatti
PublicNext

PublicNext

01/11/2020 07:31 am

Cinque Terre

40.39 K

Cinque Terre

1

ಸಂಬಂಧಿತ ಸುದ್ದಿ