ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೈದರಾಬಾದ್ ಕೈಯಲ್ಲಿ ಹೈರಾಣಾದ RCB : RCB ಪ್ಲೇ ಆಫ್ ಕನಸ್ಸು ಮತ್ತಷ್ಟು ಟಫ್ !

ಶಾರ್ಜಾ : ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ 5 ವಿಕೆಟ್ ಗೆಲುವು ಸಾಧಿಸಿದೆ.

ಸದ್ಯ ಹೈದರಾಬಾದ್ ತಂಡದ ಪ್ಲೇ ಆಫ್ ಆಸೆ ಜೀವಂತವಾಗಿದೆ. ಆದರೆ ಇತ್ತ ಆರ್ ಸಿಬಿ ತೀವ್ರ ಸಂಕಷ್ಟ ಎದುರಾಗಿದೆ.

ಆರ್ಸಿಬಿ ಬ್ಯಾಟ್ಸ್ ಮನ್ ವೈಫಲ್ಯದ ಕಾರಣ ಹೈದರಾಬಾದ್ ತಂಡಕ್ಕೆ ಕೇವಲ 121 ರನ್ ಟಾರ್ಗೆಟ್ ನೀಡಿತ್ತು.

ಸುಲಭ ಗುರಿ ಬೆನ್ನಟ್ಟಿದ ಹೈದರಾಬಾದ್ ತಂಡ ಆರಂಭದಲ್ಲೇ ನಾಯಕ ಡೇವಿಡ್ ವಾರ್ನರ್ 8 ರನ್ ಸಿಡಿಸಿ ನಿರ್ಗಮಿಸಿದರು.

ಆದರೆ ವೃದ್ಧಿಮಾನ ಸಾಹ ಹಾಗೂ ಮನೀಶ್ ಪಾಂಡೆ ಜೊತೆಯಾಟದಿಂದ ಹೈದರಾಬಾದ್ ಚೇತರಿಸಿಕೊಂಡಿತು. ಪಾಂಡೆ ಹಾಗೂ ಸಾಹ 2ನೇ ವಿಕೆಟ್ 50 ರನ್ ಜೊತೆಯಾಟ ನೀಡಿದರು. ಮನೀಶ್ ಪಾಂಡೆ 19 ಎಸೆತದಲ್ಲಿ 26 ರನ್ ಸಿಡಿಸಿ ಔಟಾದರು.

ಬ್ಯಾಟಿಂಗ್ನಿಂದ ಸನ್ ರೈಸರ್ಸ್ ಹೈದರಾಬಾದ್ ತಂಡ ಯಾವುದೇ ಆತಂಕವಿಲ್ಲದೆ ಓವರ್ ಗಳಲ್ಲಿ ಗುರಿ ಸಾಧಿಸಿತು.

5 ವಿಕೆಟ್ ಗೆಲುವು ಸಾಧಿಸಿದ ಹೈದರಾಬಾದ್ ತಂಡ ಪ್ಲೇ ಆಫ್ ಅವಕಾಶವನ್ನು ಜೀವಂತವಾಗಿರಿಸಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ಲೇ ಆಫ್ ಹಾದಿ ಮತ್ತಷ್ಟು ಕಠಿಣಗೊಂಡಿದೆ.

Edited By : Nirmala Aralikatti
PublicNext

PublicNext

31/10/2020 11:06 pm

Cinque Terre

30.26 K

Cinque Terre

8

ಸಂಬಂಧಿತ ಸುದ್ದಿ