ಶಾರ್ಜಾ : ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬ್ಯಾಟಿಂಗ್ ವೈಫಲ್ಯ ಅನುಭವಿಸಿ ಎಸ್ ಆರ್ ಎಚ್ ಗೆ 121 ರನ್ಸ್ ಟಾರ್ಗೆಟ್ ಕೊಟ್ಟಿದೆ.
ಸಾಧಾರಣ ಮೊತ್ತ ಕಲೆಹಾಕಿದೆ ಆರ್ಸಿಬಿ 20 ಓವರ್ಗಳಲ್ಲಿ 120 ರನ್ ಗಳಿಸಿದೆ.
ಟಾಸ್ ಸೋತು ಬ್ಯಾಟಿಂಗ್ ಗೆ ಇಳಿದ ಆರ್ ಸಿಬಿಯ ಓಪನರ್ ದೇವದತ್ ಪಡಿಕ್ಕಲ್ ಈ ಬಾರಿ ಕೇವಲ 5 ರನ್ ಗೆ ಔಟ್ ಆಗುವ ಮೂಲಕ ನಿರಾಸೆ ಮೂಡಿಸಿದರೆ, ನಾಯಕ ವಿರಾಟ್ ಕೊಹ್ಲಿ ಕೇವಲ 7 ರನ್ ಗೆ ನಿರ್ಗಮಿಸಿದರು.
ಎಬಿ ಡಿವಿಲಿಯರ್ಸ್ ಹಾಗೂ ಜೋಶ್ ಫಿಲಿಪ್ ಜೊತೆಯಾಟವಾಡಿ 43 ರನ್ ಗೆ ಅಂತ್ಯವಾಯಿತು.
ಡಿವಿಲಿಯರ್ಸ್ 24 ಎಸೆತಗಳಲ್ಲಿ 24 ರನ್ ಗಳಿಸಿದ್ರೆ 32 ರನ್ ಗಳಿಸಿದ್ದ ಫಿಲಿಪ್ ಕೂಡ ಬ್ಯಾಟ್ ಕೆಳಗಿಟ್ಟರು ವಾಷಿಂಗ್ಟನ್ ಸುಂದರ್(21) ತಂಡದ ಖಾತೆಗೆ ತಮ್ಮ ಕೈಲಾದಷ್ಟು ರನ್ ಸೇರಿಸಿದರು.
ಕ್ರಿಸ್ ಮೊರೀಶ್ ಮೂರು ರನ್,ಗುರುಕೀರತ್ 24 ಎಸೆತಗಳಲ್ಲಿ ಅಜೇಯ 16 ರನ್ ಗಳಿಸಿದರು.
ಅಂತಿಮವಾಗಿ ಆರ್ ಸಿಬಿ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 120 ರನ್ ಗಳಿಸಿತು.
ಎಸ್ ಆರ್ ಹೆಚ್ ಪರ ಸಂದೀಪ್ ಶರ್ಮಾ ಹಾಗೂ ಜೇಸನ್ ಹೋಲ್ಡರ್ ತಲಾ 2 ವಿಕೆಟ್ ಕಿತ್ತರೆ, ಟಿ. ನಟರಾಜನ್, ರಶೀದ್ ಖಾನ್ ಹಾಗೂ ಶಜ್ಬಾಜ್ ನದೀಂ ತಲಾ 1 ವಿಕೆಟ್ ಪಡೆದರು.
PublicNext
31/10/2020 09:13 pm