ಅಬುಧಾಬಿ: ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಸಿಕ್ಸರ್ ದಾಖಲೆ ಬರೆದಿದ್ದ ಕಿಂಗ್ಸ್ ಇಲೆವೆನ್ ಪಂಜಾಬ್ ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ದಂಡಕ್ಕೂ ಗುರಿಯಾಗಿದ್ದಾರೆ.
2ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಗೇಲ್ 99 ರನ್ ಚಚ್ಚಿದ್ದರು. ಆದರೆ ಆರ್ಚರ್ ಎಸೆದ ಚಂಡನ್ನು ಬೌಂಡರಿಗೆ ಅಟ್ಟಲು ಹೋಗಿ ವಿಕೆಟ್ ಒಪ್ಪಿಸಿದರು. ಈ ವೇಳೆ ಬೇಸರ ಹಾಗೂ ಸಿಟ್ಟಿನಿಂದ ಮೈದಾನದಲ್ಲಿ ಬ್ಯಾಟ್ ಎಸೆದರು. ಸಿಟ್ಟಿನಿಂದ ಎಸೆದ ಬ್ಯಾಟ್ ದೂರ ಹೋಗಿ ಬಿದ್ದಿತ್ತು. ನಂತರ ಸ್ವಲ್ಪ ಕೋಪ ತಗ್ಗಿಸಿಕೊಂಡ ಗೇಲ್ ಆರ್ಚರ್ಗೆ ಶೇಕ್ ಹ್ಯಾಂಡ್ ಮಾಡಿ ಮೈದಾನದಿಂದ ನಿರ್ಗಮಿಸಿದರು. ಈ ವಿಡಿಯೋ ಸಾಕಷ್ಟು ವೈರಲ್ ಆಗಿದೆ.
ಐಪಿಎಲ್ ನಿಯಮಗಳನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಗೇಲ್ ಅವರಿಗೆ ದಂಡ ಹಾಕಲಾಗಿದೆ. ಅವರ ಮ್ಯಾಚ್ ಸಂಭಾವನೆಯ ಶೇ.10ರನ್ನು ದಂಡವಾಗಿ ನೀಡುವಂತೆ ಐಪಿಎಲ್ ಮಂಡಳಿ ಸೂಚಿಸಿದೆ.
PublicNext
31/10/2020 03:25 pm