ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆರ್‌ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ಹೈದರಾಬಾದ್‌ ತಂಡಕ್ಕೆ ಆಘಾತ

ಶಾರ್ಜಾ: ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಕ್ಕೂ ಮುನ್ನವೇ ಸನ್ ರೈಸರ್ಸ್ ಹೈದರಾಬಾದ್‌ ತಂಡವು ಆಘಾತ ಅನುಭವಿಸಿದೆ.

ಹೌದು. ಮಿಚೆಲ್ ಮಾರ್ಷ್, ಭವನೇಶ್ವರ್ ಕುಮಾರ್ ಬೆನ್ನಲ್ಲೇ ಹೈದರಾಬಾದ್‌ ತಂಡದ ಆಲ್‌ರೌಂಡರ್ ವಿಜಯ್ ಶಂಕರ್ 2020ರ ಐಪಿಎಲ್ ಟೂರ್ನಿಯಿಂದ ಹೊರ ಬಿದ್ದಿದ್ದಾರೆ. ಗಾಯದ ಸಮಸ್ಯೆಯಿಂದಾಗಿ ವಿಜಯ್ ಶಂಕರ್ ಐಪಿಎಲ್‌ನಿಂದ ಹೊರ ನಡೆದಿರುವುದಾಗಿ ತಿಳಿದು ಬಂದಿದೆ.

ಡೇವಿಡ್‌ ವಾರ್ನರ್ ನೇತೃತ್ವದ ಹೈದರಾಬಾದ್ ತಂಡವು ಆಡಿರುವ 12 ಪಂದ್ಯಗಳಲ್ಲಿ 5ರಲ್ಲಿ ಗೆಲುವು ದಾಖಲಿಸಿ 10 ಅಂಕಗಳನ್ನು ಕಲೆ ಹಾಕಿದೆ. ಈ ಮೂಲಕ ಪ್ಲೇ ಆಫ್ ಪ್ರವೇಶದತ್ತ ಕಣ್ಣಿಟ್ಟಿದೆ. ಆರ್‌ಸಿಬಿ ಹಾಗೂ ಮುಂದಿನ ಎಲ್ಲಾ ಪಂದ್ಯಗಳಲ್ಲಿ ವಾರ್ನರ್ ಪಡೆಗೆ ಗೆಲುವು ಅನಿವಾರ್ಯವಾಗಿದೆ. ಈ ಮಧ್ಯೆ ಆಟಗಾರರು ಗಾಯದ ಸಮಸ್ಯೆಯಿಂದ ಹೊರಗೆ ನಡೆಯುತ್ತಿರುವುದು ತಂಡಕ್ಕೆ ಭಾರೀ ಹೊರೆಯಾಗಿದೆ.

Edited By : Vijay Kumar
PublicNext

PublicNext

31/10/2020 02:00 pm

Cinque Terre

64.34 K

Cinque Terre

55

ಸಂಬಂಧಿತ ಸುದ್ದಿ