ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ನಿಮಗೆ ಎಲ್ಲವೂ ಬಾಂಬೆ, ಅದನ್ನು ಮೀರಿ ಯೋಚಿಸಿ'

ಮುಂಬೈ: ಆಸ್ಟ್ರೇಲಿಯಾ ವಿರುದ್ಧದ ನಾಲ್ಕು ಟೆಸ್ಟ್‌ ಪಂದ್ಯಗಳ ಸರಣಿಗೆ ಕನ್ನಡಿಗ ಕೆ.ಎಲ್‌.ರಾಹುಲ್‌ ಅವರ ಆಯ್ಕೆಯನ್ನು ಟೀಕಿಸಿದ ಕ್ರಿಕೆಟ್‌ ಕಾಮೆಂಟೇಟರ್ ಸಂಜಯ್‌ ಮಂಜ್ರೇಕರ್ ಅವರಿಗೆ ಟೀಂ ಇಂಡಿಯಾ ಮಾಜಿ ಆಟಗಾರ ಕ್ರಿಸ್ ಶ್ರೀಕಾಂತ್ ಬಿಸಿ ಮುಟ್ಟಿಸಿದ್ದಾರೆ.

ಕ್ರಿಸ್ ಶ್ರೀಕಾಂತ್ ಅವರು ಯೂಟ್ಯೂಬ್ ಚಾನೆಲ್‌ವೊಂದರಲ್ಲಿ ಮಾತನಾಡುತ್ತಾ 'ಸಂಜಯ್ ಮಂಜ್ರೇಕರ್ ಅವರನ್ನು ಏಕಾಂಗಿಯಾಗಿ ಬಿಟ್ಟುಬಿಡಿ. ಅವರಿಗೆ ಮಾಡಲು ಬೇರೆ ಕೆಲಸವಿಲ್ಲ. ಅವರು 'ಬಾಂಬೆ' ಬಿಟ್ಟು ಬೇರೆ ಯೋಚನೆ ಮಾಡುವುದಿಲ್ಲ. ಅದು ಅವರ ಸಮಸ್ಯೆ. ನಾವು ತಟಸ್ಥರಾಗಿ ಮಾತನಾಡುತ್ತೇವೆ. ಆದರೆ ಮಂಜ್ರೇಕರ್ ಬಾಂಬೆ ಹೊರತುಪಡಿಸಿ ಯೋಚಿಸಲಾರರು. ಮಂಜ್ರೇಕರ್ ತರದ ವ್ಯಕ್ತಿಗಳಿಗೆ ಎಲ್ಲವೂ ಬಾಂಬೆ, ಬಾಂಬೆ ಹಾಗೂ ಬಾಂಬೆ. ಅವರು ಬಾಂಬೆ ಹೊರತುಪಡಿಸಿ ಯೋಚಿಸಬೇಕು" ಟಾಂಗ್ ಕೊಟ್ಟಿದ್ದಾರೆ.

Edited By : Vijay Kumar
PublicNext

PublicNext

29/10/2020 03:16 pm

Cinque Terre

29.84 K

Cinque Terre

1

ಸಂಬಂಧಿತ ಸುದ್ದಿ