ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕನ್ನಡಿಗ ಪಡಿಕ್ಕಲ್ ಅಬ್ಬರದ ಅರ್ಧಶತಕ, ಕೈಕೊಟ್ಟ ಕೊಹ್ಲಿ- ಎಬಿಡಿ: ಮುಂಬೈಗೆ 165 ರನ್‌ಗಳ ಗುರಿ

ಅಬುಧಾಬಿ: ಕನ್ನಡಿಗ ದೇವದತ್ ಪಡಿಕ್ಕಲ್ ಅಬ್ಬರದ ಅರ್ಧಶತಕದಿಂದ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡವು ಮುಂಬೈ ಇಂಡಿಯನ್ಸ್‌ಗೆ 165 ರನ್‌ಗಳ ಗುರಿ ನೀಡಿದೆ.

ಅಬುಧಾಬಿ ಶೇಕ್ ಝಯೇದ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಪಿಎಲ್​ನ 48ನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ 6 ವಿಕೆಟ್‌ ನಷ್ಟಕ್ಕೆ 164 ರನ್‌ ಗಳಿಸಿದೆ. ಆರ್‌ಸಿಬಿ ಪರ ದೇವದತ್ ಪಡಿಕ್ಕಲ್ 74 ರನ್‌ (45 ಎಸೆತ, 12 ಬೌಂಡರಿ, 1 ಸಿಕ್ಸ್) ಹಾಗೂ ಜೋಷ್ ಫಿಲಿಪ್ 33 ರನ್ (24 ಎಸೆತ, 4 ಬೌಂಡರಿ, 1 ಸಿಕ್ಸ್) ಸಿಡಿಸಿದರು.

ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಆರ್​ಸಿಬಿ ಉತ್ತಮ ಆರಂಭ ಪಡೆದುಕೊಂಡಿತು. ಓಪನರ್​ಗಳಾದ ದೇವದತ್ ಪಡಿಕ್ಕಲ್ ಹಾಗೂ ಜೋಷ್ ಫಿಲಿಪ್ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದರು. ಈ ಜೋಡಿ ಮೊದಲ ವಿಕೆಟ್​ಗೆ 71 ರನ್​ಗಳ ಕಾಣಿಕೆ ನೀಡಿತು. ಜೋಷ್ ಫಿಲಿಪ್ ವಿಕೆಟ್‌ ಬಳಿಕ ಮೈದಾನಕ್ಕಿಳಿದ ನಾಯಕ ವಿರಾಟ್ ಕೊಹ್ಲಿ 9 ರನ್‌ಗೆ ವಿಕೆಟ್‌ ಒಪ್ಪಿಸಿದರು. ಈ ನಡುವೆ ಪಡಿಕ್ಕಲ್ ಐಪಿಎಲ್​ನಲ್ಲಿ 3ನೇ ಅರ್ಧಶತಕ ಸಿಡಿಸಿ ಮಿಂಚಿದರು.

ಬಳಿಕ ಎಬಿ ಡಿವಿಲಿಯರ್ಸ್​ 15 ರನ್‌, ಶಿವಂ ದುಬೆ 2 ರನ್ ಹಾಗೂ ಕ್ರಿಸ್ ಮೊರೀಸ್ 4 ರನ್‌ಗೆ ವಿಕೆಟ್‌ ಕಳೆದುಕೊಂಡರು. ಕೊನೆಯಲ್ಲಿ ಗುರುಕೀರತ್ ಮನ್​ ಸಿಂಗ್ ಅಜೇಯ 14 ರನ್ ಹಾಗೂ ವಾಷಿಂಗ್ಟನ್ ಸುಂದರ್ ಅಜೇಯ 10 ರನ್ ಬಾರಿಸಿದರು.

ಮುಂಬೈ ಇಂಡಿಯನ್ಸ್‌ ಪರ ಜಸ್‌ಪ್ರೀತ್ ಬುಮ್ರಾ 3 ವಿಕೆಟ್‌ (4 ಓವರ್‌, 14 ರನ್, 1 ಮೇಡನ್) ಪಡೆದು ಮಿಂಚಿದರೆ, ರಾಹುಲ್‌ ಚಹರ್, ಟ್ರೆಂಟ್‌ ಬೌಲ್ಟ್‌ ಹಾಗೂ ಕೀರನ್‌ ಪೊಲಾರ್ಡ್ ತಲಾ ಒಂದು ವಿಕೆಟ್‌ ಪಡೆದು ತಂಡಕ್ಕೆ ಆಸರೆಯಾದರು.

Edited By : Vijay Kumar
PublicNext

PublicNext

28/10/2020 09:13 pm

Cinque Terre

58.57 K

Cinque Terre

14

ಸಂಬಂಧಿತ ಸುದ್ದಿ