ದುಬೈ: ಬ್ಯಾಟಿಂಗ್ ಬಳಿಕ ಬೌಲಿಂಗ್‌ನಲ್ಲೂ ಮಿಂಚಿದ ಸನ್ರೈಸರ್ಸ್ ಹೈದರಾಬಾದ್ ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 88 ರನ್‌ಗಳಿಂದ ಗೆದ್ದು ಬೀಗಿದೆ.
ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್-13ನೇ ಆವೃತ್ತಿಯ 47ನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್ 219 ರನ್ ಚಚ್ಚಿತ್ತು. ಬೃಹತ್ ಮೊತ್ತದ ಟಾರ್ಗೆಟ್ ಬೆನ್ನಟ್ಟಿದ ಡೆಲ್ಲಿ 19 ನೇ ಮುಕ್ತಾಯಕ್ಕೆ ಸರ್ವಪತನ ಕಂಡು ಕೇವಲ 131 ರನ್ ಗಳಿಸಲು ಮಾತ್ರ ಶಕ್ತವಾಯಿತು. ಡೆಲ್ಲಿ ಪರ ರಿಷಭ್ ಪಂತ್ 36 ರನ್, ಅಜಿಂಕ್ಯಾ ರಹಾನೆ 26 ರನ್ ಗಳಿಸಿದರೆ, ಕೊನೆಯಲ್ಲಿ ತುಷಾರ್ ದೇಶಪಾಂಡೆ 20 ರನ್ ಬಾರಿಸಿದರು. ಉಳಿದಂತೆ ಎಲ್ಲ ಆಟಗಾರರು ಬಹುಬೇಗ ವಿಕೆಟ್ ಒಪ್ಪಿಸಿ ಹೊರ ನಡೆದರು.
ಹೈದರಾಬಾದ್ ಪರ ರಶೀದ್ ಖಾನ್ 3 ವಿಕೆಟ್ (4 ಓವರ್, ಕೇವಲ 7 ರನ್), ಸಂದೀಪ್ ಶರ್ಮಾ ಹಾಗೂ ಟಿ. ನಟರಾಜನ್ ತಲಾ 2 ವಿಕೆಟ್ ಪಡೆದು ಮಿಂಚಿದರೆ, ಜೇಸನ್ ಹೋಲ್ಡರ್, ಶಹ್ಬಾಜ್ ನದೀಂ ಹಾಗೂ ವಿಜಯ್ ಶಂಕರ್ ತಲಾ ಒಂದು ವಿಕೆಟ್ ಪಡೆದು ತಂಡದ ಗೆಲುವಿಗೆ ಕೊಡುಗೆ ನೀಡಿದರು.
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ್ದ ಹೈದರಾಬಾದ್ 2 ವಿಕೆಟ್ ನಷ್ಟಕ್ಕೆ 219 ರನ್ ಬಾರಿಸಿತ್ತು. ಹೈದರಾಬಾದ್ ಪರ ವೃದ್ಧಿಮಾನ್ ಸಹಾ 87 ರನ್ (45 ಎಸೆತ, 12 ಬೌಂಡರಿ, 2 ಸಿಕ್ಸರ್), ಡೇವಿಡ್ ವಾರ್ನರ್ 66 ರನ್ (34 ಎಸೆತ, 8 ಬೌಂಡರಿ, 2 ಸಿಕ್ಸರ್), ಮನೀಷ್ ಪಾಂಡೆ ಅಜೇಯ 44 ರನ್ (31 ಎಸೆತ, 4 ಬೌಂಡರಿ, 1 ಸಿಕ್ಸ್) ಹಾಗೂ ಕೇನ್ ವಿಲಿಯಮ್ಸನ್ ಅಜೇಯ 11 ರನ್ (10 ಎಸೆತ, 1 ಬೌಂಡರಿ) ಗಳಿಸಿದ್ದರು.
PublicNext
27/10/2020 11:06 pm