ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

IPL 2020- DC vs SRH: ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಡೆಲ್ಲಿ

ದುಬೈ: ಐಪಿಎಲ್-13ನೇ ಆವೃತ್ತಿಯ 47ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಿವೆ. ಟಾಸ್ ಗೆದ್ದ ಡೆಲ್ಲಿ ತಂಡದ ನಾಯಕ ಶ್ರೇಯಸ್ ಅಯ್ಯರ್ ಬೌಲಿಂಗ್ ಆಯ್ದುಕೊಂಡಿದ್ದಾರೆ.

ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಈ ಹಣಾಹಣಿ ನಡೆಯಲಿದೆ. ಉಭಯ ತಂಡಗಳು ಈವರೆಗೆ 16 ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ಹೈದರಾಬಾದ್ 10 ಪಂದ್ಯಗಳಲ್ಲಿ ಗೆಲ್ಲುವ ಮೂಲಕ ಭಾರೀ ಮುನ್ನಡೆಯನ್ನು ಪಡೆದುಕೊಂಡಿದೆ. ಡೆಲ್ಲಿ 6 ಪಂದ್ಯಗಳಲ್ಲಿ ಗೆಲುವು ದಾಖಲಿಸಿದೆ. ಆದರೆ ಈ ಬಾರಿಯ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಡೆಲ್ಲಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.

ತಂಡ ಹೀಗಿದೆ:

ಡೆಲ್ಲಿ: ಶಿಖರ್‌ ಧವನ್‌, ರಿಷಭ್‌ ಪಂತ್, ಅಜಿಂಕ್ಯ ರಹಾನೆ, ಮಾರ್ಕಸ್‌ ಸ್ಟೋಯಿನಿಸ್‌, ಶಿಮ್ರೋನ್‌ ಹೆಟ್ಮೆಯರ್‌, ಅಕ್ಷರ್ ಪಟೇಲ್, ಟಿ. ದೇಶ್‌ಪಾಂಡೆ , ಕಗಿಸೊ ರಬಾಡ, ಆರ್. ಅಶ್ವಿನ್, ಎನ್ರಿಚ್‌ ನೋರ್ಟ್ಜೆ

ಹೈದರಾಬಾದ್‌:‌ ಡೇವಿಡ್‌ ವಾರ್ನರ್‌ (ನಾಯಕ), ಮನೀಷ್ ಪಾಂಡೆ, ಜೇಸನ್‌ ಹೋಲ್ಡರ್‌, ವಿಜಯ್‌ ಶಂಕರ್‌, ವೃದ್ಧಿಮಾನ್ ಸಹಾ (ವಿಕೆಟ್‌ ಕೀಪರ್‌), ಶಹಬಾಜ್‌ ನದೀಂ, ಕೇನ್ ವಿಲಿಯಮ್ಸನ್‌, ಅಬ್ದುಲ್ ಸಮದ್‌, ರಶೀದ್‌ ಖಾನ್‌, ಸಂದೀಪ್‌ ಶರ್ಮಾ, ಟಿ.ನಟರಾಜನ್‌‌

Edited By : Vijay Kumar
PublicNext

PublicNext

27/10/2020 07:18 pm

Cinque Terre

67.68 K

Cinque Terre

21

ಸಂಬಂಧಿತ ಸುದ್ದಿ