ಅಬುಧಾಬಿ : ಕ್ರಿಕೆಟ್ ಅಭಿಮಾನಿಗಳ ಮೋಸ್ಟ್ ಫೇವರೇಟ್ IPL-2020 ಫೈನಲ್ ಪಂದ್ಯ ದುಬೈನಲ್ಲಿ ಪ್ಲೇ ಆಫ್ ವೇಳಾಪಟ್ಟಿ ಪ್ರಕಟವಾಗಿದೆ.
ಐಪಿಎಲ್-2020 ಟೂರ್ನಿಯ ಪ್ಲೇ ಆಫ್ ಪಂದ್ಯಗಳ ದಿನಾಂಕವನ್ನು ಬಿಸಿಸಿಐ ಪ್ರಕಟಿಸಿದ್ದು ಮೊದಲ ಕ್ವಾಲಿಫೈಯರ್ ಮತ್ತು ಫೈನಲ್ ಪಂದ್ಯಗಳು ದುಬೈನಲ್ಲಿ ನಡೆಯಲಿದ್ದು, ಎಲಿಮಿನೇಟ್ ಮತ್ತು ಕ್ವಾಲಿಫೈಯರ್–2 ಪಂದ್ಯಗಳು ಪಂದ್ಯಗಳು ಅಬುಧಾಬಿಯಲ್ಲಿ ನಡೆಯಲಿವೆ.
ಲೀಗ್ ಹಂತದ ಪಾಯಿಂಟ್ಸ್ ಪಟ್ಟಿಯಲ್ಲಿ ಮೊದಲೆರಡು ಸ್ಥಾನ ಪಡೆಯುವ ತಂಡಗಳು ಮೊದಲ ಕ್ವಾಲಿಫೈಯರ್ ನಲ್ಲಿ ಸೆಣಸಾಡಲಿವೆ.
ಗೆದ್ದ ತಂಡ ನೇರವಾಗಿ ಫೈನಲ್ ಟಿಕೆಟ್ ಗಿಟ್ಟಿಸಿಕೊಳ್ಳಲಿದೆ. ಈ ಪಂದ್ಯವು ನವೆಂಬರ್ 5ರಂದು ನಡೆಯಲಿದೆ.
3 ಮತ್ತು 4ನೇ ಸ್ಥಾನಗಳಲ್ಲಿರುವ ತಂಡಗಳು ನವೆಂಬರ್ 6ರಂದು ಎಲಿಮಿನೇಟರ್ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.
ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಸೋಲುವ ತಂಡ ಎಲಿಮಿನೇಟರ್ ಹಣಾಹಣಿಯಲ್ಲಿ ಗೆದ್ದ ತಂಡದ ವಿರುದ್ಧ ನವೆಂಬರ್ 8 ರಂದು ಆಡಲಿದ್ದು, ಈ ಪಂದ್ಯದಲ್ಲಿ ಗೆಲ್ಲುವ ತಂಡ ಮತ್ತು ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಜಯಿಸಿದ್ದ ತಂಡದೊಂದಿಗೆ ಫೈನಲ್ ನಲ್ಲಿ ಪ್ರಶಸ್ತಿಗಾಗಿ ಹೋರಾಡಲಿದೆ.
ಐಪಿಎಲ್–2020 ಟೂರ್ನಿಯು ಸೆಪ್ಟೆಂಬರ್ 19ರಿಂದ ಆರಂಭವಾಗಿದ್ದು, ಲೀಗ್ ಹಂತದ ಪಂದ್ಯಗಳು ನವೆಂಬರ್ 3ರ ವರೆಗೆ ನಡೆಯಲಿವೆ.
PublicNext
27/10/2020 03:30 pm