ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

IPL 2020 : KKR vs DC ಡೆಲ್ಲಿಗೆ 195 ರನ್ಸ್ ಟಾರ್ಗೆಟ್ ಕೊಟ್ಟ ಕೋಲ್ಕತ ನೈಟ್‌ ರೈಡರ್ಸ್

ನಿತೀಶ್ ರಾಣಾ() ಹಾಗೂ ಸುನಿಲ್ ನರೈನ್(64) ಸಿಡಿಲಬ್ಬರದ ಅರ್ಧಶತಕದ ನೆರವಿನಿಂದ ಕೋಲ್ಕತ ನೈಟ್‌ ರೈಡರ್ಸ್ 6 ವಿಕೆಟ್ ಕಳೆದಕೊಂಡು 194 ರನ್ ಬಾರಿಸಿದ್ದು, ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಸವಾಲಿನ ಗುರಿ ನೀಡಿದೆ.

ಹೌದು, ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಕೋಲ್ಕತ ನೈಟ್‌ ರೈಡರ್ಸ್ ಮತ್ತೊಮ್ಮೆ ಉತ್ತಮ ಆರಂಭ ಪಡೆಯಲು ವಿಫಲವಾಯಿತು.

ಶುಭ್‌ಮನ್ ಗಿಲ್ 9 ರನ್ ಬಾರಿಸಿ ನೊಕಿಯೆಗೆ ವಿಕೆಟ್‌ ಒಪ್ಪಿಸಿದರೆ, ರಾಹುಲ್ ತ್ರಿಪಾಠಿ(13) ಹಾಗೂ ದಿನೇಶ್ ಕೂಡಾ(03) ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನೆಲೆಯೂರಲಿಲ್ಲ.

42 ರನ್‌ ಗಳಿಸುವಷ್ಟರಲ್ಲೇ ಕೆಕೆಆರ್‌ನ ಮೂರು ಪ್ರಮುಖ ಆಟಗಾರರು ಪೆವಿಲಿಯನ್ ಸೇರಿದ್ದರು.

ತಂಡಕ್ಕೆ ಆಸರೆಯಾದ ನರೈನ್-ರಾಣಾ: ಟೂರ್ನಿಯಲ್ಲಿ ರನ್‌ ಬರ ಅನುಭವಿಸಿದ್ದ ನಿತೀಶ್ ರಾಣಾ ಇಂದು ಆರಂಭಿಕನಾಗಿ ಕಣಕ್ಕಿಳಿದು ಕಮಾಲ್ ಮಾಡಿದರು.

ತಂಡ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ರಾಣಾ ಹಾಗೂ ಸುನಿಲ್ ನರೈನ್ 4ನೇ ವಿಕೆಟ್‌ಗೆ 115 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು.

ನರೈನ್ 32 ಎಸೆತಗಳಲ್ಲಿ 6 ಬೌಂಡರಿ ಹಾಗೂ 4 ಸಿಕ್ಸರ್ ನೆರವಿನಿಂದ 64 ರನ್ ಬಾರಿಸಿದರೆ, ರಾಣಾ 53 ಎಸೆತಗಳಲ್ಲಿ 13 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 81 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.

ಕೊನೆಯಲ್ಲಿ ನಾಯಕ ಇಯಾನ್ ಮಾರ್ಗನ್ 17 ರನ್ ಬಾರಿಸುವ ಮೂಲಕ ತಂಡದ ಮೊತ್ತವನ್ನು 190ರ ಗಡಿ ದಾಟಿಸಿದರು.

ಡೆಲ್ಲಿ ಕ್ಯಾಪಿಟಲ್ಸ್ ಪರ ನೊಕಿಯೆ, ರಬಾಡ ಹಾಗೂ ಸ್ಟೋಯ್ನಿಸ್ ತಲಾ 2 ವಿಕೆಟ್ ಪಡೆದರು.

Edited By : Nirmala Aralikatti
PublicNext

PublicNext

24/10/2020 05:35 pm

Cinque Terre

47.84 K

Cinque Terre

1

ಸಂಬಂಧಿತ ಸುದ್ದಿ