ನವದೆಹಲಿ- ಹೃದಯಾಘಾತವಾದ ಕಾರಣ ನಿನ್ನೆ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಮಾಜಿ ಕ್ರಿಕೆಟಿಗ ಕಪಿಲ್ ದೇವ್ ಚೇತರಿಸಿಕೊಂಡಿದ್ದಾರೆ. ಮತ್ತೆ ಗಾಲ್ಫ್ ಆಡಲು ಮೈದಾನಕ್ಕೆ ಮರಳಲಿದ್ದೇನೆ ಎಂದು ಆತ್ಮ ವಿಶ್ವಾಸದಿಂದ ಹೇಳಿಕೊಂಡಿದ್ದಾರೆ.
ಭಾರತಕ್ಕೆ ಮೊಟ್ಟಮೊದಲ ಕ್ರಿಕೆಟ್ ವಿಶ್ವ ಕಪ್ ತಂದುಕೊಟ್ಟ ಮಾಜಿ ಕ್ರಿಕೆಟ್ ಆಟಗಾರ ಕಪಿಲ್ ದೇವ್ ಅವರ ಆರೋಗ್ಯ ಚೇತರಿಕೆಗೆ ದೇಶಾದ್ಯಂತ ಅಭಿಮಾನಿಗಳ ಹಾರೈಕೆಯ ಕೂಗು ಕೇಳಿ ಬಂದಿತ್ತು. ದಿಗ್ಗಜ ಆಟಗಾರನಿಗೆ ಆಂಜೀಯೋಪ್ಲಾಸ್ಟ ಶಸ್ತ್ರ ಚಿಕಿತ್ಸೆ ಮಾಡಿದ್ದ ವೈದ್ಯರ ತಂಡ ಆಪರೇಶನ್ ಸಕ್ಸೆಸ್ ಆದ ಹಿನ್ನಲೆಯಲ್ಲಿ ಗೆಲುವಿನ ನಗೆ ಬೀರಿದ್ದಾರೆ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಮುನ್ನವೇ ಕಪಿಲ್ ದೇವ್ ಮತ್ತೆ ಗಾಲ್ಫ್ ಆಡಲು ಕಾತರರಾಗಿ ಕಾಯುತ್ತಿದ್ದಾರೆ.
ಸಂಪೂರ್ಣ ಗುಣಮುಖನಾದ ನಂತರ ಆಸ್ಪತ್ರಯಿಂದ ನಿರ್ಗಮಿಸುತ್ತೇನೆ. ನನ್ನ ಆರೋಗ್ಯಕ್ಕಾಗಿ ಪ್ರಾರ್ಥಿಸಿದ ನೀವೆಲ್ಲರೂ ನನ್ನ ಕುಟುಂಬ ಸದಸ್ಯರಿದ್ದಂತೆ. ನಿಮ್ಮೆಲ್ಲರ ಹಾರೈಕೆಯಿಂದ ನಾನು ಚೇತರಿಸಿಕೊಂಡಿದ್ದೇನೆ ಎಂದು ಟ್ವೀಟ್ ಮಾಡಿರುವ ಕಪಿಲ್ ದೇವ್ ಎಲ್ಲರಿಗೂ ಥ್ಯಾಂಕ್ಸ್ ಹೇಳಿದ್ದಾರೆ.
PublicNext
24/10/2020 01:37 pm