ಶಾರ್ಜಾ: ಅಂಕಪಟ್ಟಿಯ ಕೊನೆಯಲ್ಲಿ ಸ್ಥಾನ ಪಡೆದಿರುವ ಚೆನ್ನೈ ಸೂಪರ್ ಕಿಂಗ್ಸ್ ಬಲಿಷ್ಟ ಮುಂಬೈ ಇಂಡಿಯನ್ಸ್ ವಿರುದ್ಧ ಇಂದು ಕಾದಾಟ ನಡೆಸಲಿದೆ.
ಶಾರ್ಜಾ ಕ್ರಿಕೆಟ್ ಮೈದಾನದಲ್ಲಿ ಐಪಿಎಲ್ 13ನೇ ಆವೃತ್ತಿಯ 41ನೇ ಪಂದ್ಯ ಇಂದು ನಡೆಯಲಿದ್ದು, ಚೆನ್ನೈ ತಂಡಕ್ಕೆ ಗೆಲುವು ಅನಿವಾರ್ಯವಾಗಿದೆ. ಒಂದು ವೇಳೆ ಈ ಪಂದ್ಯದಲ್ಲಿ ಎಂ.ಎಸ್.ಧೋನಿ ನೇತೃತ್ವದ ಪಡೆಗೆ ಸೋಲು ಕಂಡರೆ ಪ್ಲೇ ಆಫ್ ದೂರವಾಗುತ್ತದೆ. ಇತ್ತ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲು ರೋಹಿತ್ ಪಡೆ ಕಣ್ಣಿಟ್ಟಿದೆ.
ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಗೆಲುವು ದಾಖಲಿಸಿದ ಬಳಿಕ ಚೆನ್ನೈ ತಂಡದ ಪ್ರದರ್ಶನ ಕಳೆಗುಂದಿದೆ. ಈಗಾಗಲೇ ಆಡಿರುವ 10 ಪಂದ್ಯಗಳಲ್ಲಿ ಕೇವಲ ಮೂರು ಪಂದ್ಯ ಗೆದ್ದಿದ್ದು, ಮುಂಬೈ ವಿರುದ್ಧ ಹಿಂದಿನ ಗೆಲುವಿನ ವಿಶ್ವಾಸದೊಂದಿಗೆ ಮತ್ತೆ ಜಯದ ಹಾದಿಗೆ ಮರಳಲು ಯೋಜಿಸಿದೆ.
ಐಪಿಎಲ್‌ನಲ್ಲಿ ಚೆನ್ನೈ ಮತ್ತು ಮುಂಬೈ ಇದುವರೆಗೆ 29 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಮುಂಬೈ 17 ಪಂದ್ಯಗಳನ್ನು ಗೆದ್ದುಕೊಂಡಿದ್ದರೆ, ಸಿಎಸ್‌ಕೆ 12 ಪಂದ್ಯಗಳಲ್ಲಿ ಮಾತ್ರ ಜಯಿಸಿದೆ.
ಸಂಭಾವ್ಯ ಆಟಗಾರರು:
ಚೆನ್ನೈ ಸೂಪರ್ ಕಿಂಗ್ಸ್: ಸ್ಯಾಮ್ ಕರ್ರನ್, ಫಾಫ್ ಡು ಪ್ಲೆಸಿಸ್, ಶೇನ್ ವ್ಯಾಟ್ಸನ್, ಅಂಬಟಿ ರಾಯುಡು, ಕೇದಾರ್ ಜಾಧವ್/ ಎನ್ ಜಗದೀಶನ್, ಎಂಎಸ್ ಧೋನಿ, ರವೀಂದ್ರ ಜಡೇಜಾ, ದೀಪಕ್ ಚಹಾರ್, ಶಾರ್ದುಲ್ ಠಾಕೂರ್, ಪಿಯೂಷ್ ಚಾವ್ಲಾ /, ಜೋಶ್ ಹೇಜಲ್‌ವುಡ್.
ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ, ಕ್ವಿಂಟನ್ ಡಿ ಕಾಕ್, ಸೂರ್ಯಕುಮಾರ್ ಯಾದವ್, ಇಶನ್ ಕಿಶನ್, ಕೀರನ್ ಪೊಲಾರ್ಡ್, ಹಾರ್ದಿಕ್ ಪಾಂಡ್ಯ, ಕ್ರುನಾಲ್ ಪಾಂಡ್ಯ, ಜೇಮ್ಸ್ ಪ್ಯಾಟಿನ್ಸನ್, ರಾಹುಲ್ ಚಹರ್, ಟ್ರೆಂಟ್ ಬೌಲ್ಟ್, ಜಸ್ಪ್ರೀತ್ ಬುಮ್ರಾ.
PublicNext
23/10/2020 05:17 pm