ದುಬೈ: ಅನುಭವಿ ಓವರ್ ಬ್ಯಾಟ್ಸ್‌ಮನ್ ಶಿಖರ್ ಧವನ್ ಭರ್ಜರಿ ಬ್ಯಾಟಿಂಗ್ ಸಹಾಯದಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ 165 ರನ್‌ಗಳ ಗುರಿ ನೀಡಿದೆ.
ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 13ನೇ ಆವೃತ್ತಿಯ ಐಪಿಎಲ್ನ 38ನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ತಂಡವು 5 ವಿಕೆಟ್ ನಷ್ಟಕ್ಕೆ 164 ರನ್ ಗಳಿಸಿದೆ. ತಂಡದ ಪರ ಶಿಖರ್ ಧವನ್ ಅಜೇಯ 106 ರನ್ (61 ಎಸೆತ, 12 ಬೌಂಡರಿ, 3 ಸಿಕ್ಸರ್), ಪೃಥ್ವಿ ಶಾ (7 ರನ್) , ಶ್ರೇಯಸ್ ಅಯ್ಯರ್ (14 ರನ್), ರಿಷಬ್ ಪಂತ್ (14 ರನ್), ಮಾರ್ಕಸ್ ಸ್ಟೊಯಿನಿಸ್ ಹಾಗೂ ಶಿಮ್ರೋನ್ ಹೆಟ್ಮೇರ್ ( 10 ರನ್ ) ದಾಖಲಿಸಿದರು.
ಟಾಸ್ ಗೆದ್ದು ಬ್ಯಾಟಿಂಗ್ಗೆ ಇಳಿದ ಡೆಲ್ಲಿ ತಂಡವು ಈ ಬಾರಿಯೂ ಉತ್ತಮ ಆರಂಭ ಪಡೆದುಕೊಳ್ಳುವಲ್ಲಿ ಮತ್ತೆ ಎಡವಿತು. ಶಿಖರ್ ಧವನ್ ಜೊತೆ ಕ್ರೀಸ್ಗಳಿದ ಪೃಥ್ವಿ ಶಾ ಕೇವಲ 7 ರನ್ಗೆ ಔಟ್ ಆದರು. ಈ ಬೆನ್ನಲ್ಲೇ ನಾಯಕ ಶ್ರೇಯಸ್ ಅಯ್ಯರ್ 14 ರನ್ ಗಳಿಸಿದ್ದಾಗ ವಿಕೆಟ್ ಕಳೆದುಕೊಂಡರು. ರಿಷಬ್ ಪಂತ್ ಕೂಡ ಬಹುಬೇಗ ಪೆವಿಲಿಯನ್‌ಗೆ ನಿರ್ಗಮಿಸಿದರು. ಈ ಮಧ್ಯೆ ಏಕಾಂಕಿ ಹೋರಾಟ ಮುಂದುವರಿಸಿದ ಶಿಖರ್ ಧವನ್ ಶತಕವನ್ನು ಪೂರೈಸಿದರು.
PublicNext
20/10/2020 09:13 pm