ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಂಬೈ ಇಂಡಿಯನ್ಸ್ ವಿರುದ್ಧ 2ನೇ ಸೂಪರ್ ಓವರ್ ನಲ್ಲಿ ಗೆದ್ದ ಪಂಜಾಬ್ : ಹಿರಿಯ ವೇಗಿಯನ್ನು ಶ್ಲಾಘಿಸಿದ ಕ್ಯಾಪ್ಟನ್ ರಾಹುಲ್

ದುಬೈ: ಐಪಿಎಲ್ 2020 ಇತಿಹಾಸದಲ್ಲಿ ನಿನ್ನೆ ಅಂದ್ರೆ ಅಕ್ಟೋಬರ್ 18/19 ಮಧ್ಯರಾತ್ರಿ ನಡೆದ ಪಂದ್ಯ ಇತಿಹಾಸ ನಿರ್ಮಿಸಿದೆ.

ಮುಂಬೈ ಇಂಡಿಯನ್ಸ್ ವಿರುದ್ಧ ರೋಚಕ ಜಯ ಸಾಧಿಸಿದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ ಬೋನಸ್ ಸಿಕ್ಕಂತಾಗಿದೆ.

ಭಾನುವಾರ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದ್ದ ಎರಡು ಸತತ ಸೂಪರ್ ಓವರ್ ಗಳ ಬಳಿಕ ಕಿಂಗ್ಸ್ ಇಲೆವೆನ್ ಪಂಜಾಬ್, ಮುಂಬೈ ಇಂಡಿಯನ್ಸ್ ವಿರುದ್ಧ ಜಯ ಸಾಧಿಸಿತು.

20 ಓವರ್ ಗಳ ನಿಗದಿತ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ಮುಂಬೈ ಇಂಡಿಯನ್ಸ್ ಎರಡೂ ತಂಡಗಳು 176 ರನ್ ಗಳನ್ನು ಗಳಿಸಿ ಟೈ ಮಾಡಿಕೊಂಡಿದ್ದವು.

ಮೊದಲ ಸೂಪರ್ ಓವರ್ ನಲ್ಲಿ ಜಸ್ಪ್ರಿತ್ ಬುಮ್ರಾ ಕೇವಲ ಐದು ರನ್ಗಳಿಗೆ ಆಡಿಸಿಕೊಂಡರು.

ಇದರಿಂದ ಮುಂಬೈ ಸುಲಭವಾಗಿ ಗೆಲ್ಲಬಹುದು ಎಂದು ನಿರೀಕ್ಷಿಸಲಾಗಿತ್ತು.

ಆದರೆ, ಮುಂಬೈ ಇಂಡಿಯನ್ಸ್ ನ ಕ್ವಿಂಟನ್ ಡಿ ಕಾಕ್ ಹಾಗೂ ರೋಹಿತ್ ಶರ್ಮಾ ಅವರನ್ನು ಮೊಹಮ್ಮದ್ ಶಮಿ ಕೇವಲ ಐದು ರನ್ ಗಳಿಗೆ ನಿಯಂತ್ರಿಸಿದರು.

ಆ ಮೂಲಕ ಮೊದಲ ಸೂಪರ್ ಓವರ್ ನಲ್ಲಿಯೂ ಟೈ ಆಯಿತು.

ಎರಡನೇ ಸೂಪರ್ ಓವರ್ ನಲ್ಲಿ ಬೌಲಿಂಗ್ ಮಾಡಿದ ಪಂಜಾಬ್ ನ ಕ್ರಿಸ್ ಜೋರ್ಡನ್ 11 ರನ್ ಗಳನ್ನು ನೀಡಿದರು.

ನಂತರ ಕ್ರೀಸ್ ಗೆ ಬಂದ ಮಯಾಂಕ್ ಅಗರ್ವಾಲ್ ಹಾಗೂ ಕ್ರಿಸ್ ಗೇಲ್ ಜೋಡಿ ಯಶಸ್ವಿಯಾಗಿ ಗುರಿ ತಲುಪಿಸಿತು.

ಈ ಗೆಲುವಿನ ಹೊರತಾಗಿಯೂ ಕಿಂಗ್ಸ್ ಇಲೆವೆನ್ ಪಂಜಾಬ್ ಪ್ಲೇಆಫ್ ಗೆ ಕಠಿಣ ಹಾದಿಯಲ್ಲಿದೆ.

ಪಂದ್ಯದ ಬಳಿಕ ಸ್ಟಾರ್ ಸ್ಪೋರ್ಟ್ಸ್ ಜತೆ ಮಾತನಾಡಿದ ಕೆ.ಎಲ್ ರಾಹುಲ್, "ಇದು ನಮಗೆ ಮೊದಲ ಬಾರಿ ಅನುಭವವಲ್ಲ.

ಈ ಹಿಂದೆಯೂ ಆಗಿದೆ. ಏನೇ ಆಗಲಿ ಎರಡು ಅಂಕಗಳು ನಮ್ಮ ಖಾತೆಗೆ ಸೇರಿವೆ.

ಇದು ಯಾವಾಗಲೂ ಸಂಭವಿಸುವುದಿಲ್ಲ ಆದ್ದರಿಂದ ಈ ರೀತಿಯ ಪರಿಸ್ಥಿತಿಯಲ್ಲಿ ಸಮತೋಲನದಲ್ಲಿರುವುದು ಹೇಗೆ ಎಂದು ನಿಮಗೆ ತಿಳಿದಿಲ್ಲ.

ನಿಗದಿತ ಓವರ್ ಗಳ ಪಂದ್ಯದಲ್ಲಿ ನಾವು ಅತ್ಯುತ್ತಮ ಪ್ರದರ್ಶನ ತೋರಿದ್ದೇವೆ.

ಈ ಪಂದ್ಯದ ಗೆಲುವು ಮುಂದಿನ ಹಣಾಹಣಿಗಳಿಗೆ ಬಲಿಷ್ಠವಾಗಿ ಕಮ್ ಬ್ಯಾಕ್ ಮಾಡಲು ನೆರವಾಗುತ್ತದೆ," ಎಂದು ಹೇಳಿದರು.

ತೆಗೆದುಕೊಳ್ಳಲು ಬಯಸುತ್ತೇವೆ ಮತ್ತು ಮೊದಲ ಏಳರಲ್ಲಿ ನೀವು ಸಾಕಷ್ಟು ಜಯಗಳಿಸದಿದ್ದಾಗ, ಪ್ರತಿ ಗೆಲುವು ಸಿಹಿಯಾಗಿರುತ್ತದೆ,"ಎಂದು ನಾಯಕ ಸೇರಿಸಲಾಗಿದೆ," ಎಂದು ನಾಯಕ ಕೆ.ಎಲ್ ರಾಹುಲ್ ತಿಳಿಸಿದರು.

Edited By : Nirmala Aralikatti
PublicNext

PublicNext

19/10/2020 11:26 am

Cinque Terre

81.64 K

Cinque Terre

4

ಸಂಬಂಧಿತ ಸುದ್ದಿ