ದುಬೈ : ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಮುಂಬೈ ಇಂಡಿಯನ್ಸ್ 6 ವಿಕೆಟ್ ನಷ್ಟಕ್ಕೆ 177 ರನ್ ಸಿಡಿಸಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಮುಂಬೈ ಆರಂಭದಲ್ಲೇ ರೋಹಿತ್ ಶರ್ಮಾ ಕೇವಲ 9 ರನ್ ಸಿಡಿಸಿ ಔಟಾದರು.
ಕ್ವಿಂಟನ್ ಡಿಕಾಕ್ ಜೊತೆ ಸೇರಿ ಕ್ರುನಾಲ್ ಪಾಂಡ್ಯ ಹೋರಾಟ ಮುಂದುವರಿಸಿದರು. ಕ್ರುನಾಲ್ ಪಾಂಡ್ಯ 34 ರನ್ ಸಿಡಿಸಿ ಔಟಾದರು.
ಇನ್ನು ಹಾಫ್ ಸೆಂಚುರಿ ಸಿಡಿಸಿ ಮುನ್ನಗ್ಗುತ್ತಿದ್ದ ಡಿಕಾಕ್ 53 ರನ್ ಸಿಡಿಸಿ ನಿರ್ಗಮಿಸಿದರು.
ಅಂತಿಮ ಹಂತದಲ್ಲಿ ಕೀರನ್ ಪೋಲಾರ್ಡ್ ನತನ್ ಕೌಲ್ಟರ್ ನೈಲ್ ಹೋರಾಟದಿಂದ ಮುಂಬೈ ಚೇತರಿಸಿಕೊಂಡಿತು.
ಪೋಲಾರ್ಡ್ ಅಜೇಯ 34 ಹಾಗೂ ನತನ್ ಅಜೇಯ 24 ರನ್ ಸಿಡಿಸಿದರು. ಈ ಮೂಲಕ ಮುಂಬೈ ಇಂಡಿಯನ್ಸ್ 6 ವಿಕೆಟ್ ನಷ್ಟಕ್ಕೆ 176 ರನ್ ಸಿಡಿಸಿತು.
PublicNext
18/10/2020 09:23 pm