ಅಬುಧಾಬಿ : ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಕೋಲ್ಕತ್ತ ನೈಟ್ ರೈಡರ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 163 ರನ್ ಕಲೆಹಾಕಿದೆ.
ಇನಿಂಗ್ಸ್ ಆರಂಭಿಸಿದ ಶುಭಮನ್ ಗಿಲ್ ಹಾಗೂ ರಾಹುಲ್ ತ್ರಪಾಠಿ ಜೋಡಿ ಮೊದಲ ವಿಕೆಟ್ ಗೆ 6 ಓವರ್ ಗಳಲ್ಲಿ 48 ರನ್ ಕಲೆಹಾಕಿತು.
ಗಿಲ್ 36 ರನ್ ಗಳಿಸಿದರೆ, ತ್ರಿಪಾಠಿ 23 ರನ್ ಗಳಿಸಿ ಔಟಾದರು. ನಂತರ ಬಂದ ನಿತೀಶ್ ರಾಣಾ 29 ರನ್ ಗಳಿಸಿದರು.
ಆಂಡ್ರೆ ರಸೆಲ್ ಕೇವಲ 9 ರನ್ ಗಳಿಸಿ ಔಟಾದರು. ಬಳಿಕ ಜೊತೆಯಾದ ನಾಯಕ ಎಯಾನ್ ಮಾರ್ಗನ್ ಮತ್ತು ಮಾಜಿ ನಾಯಕ ದಿನೇಶ್ ಕಾರ್ತಿಕ್ ಜೋಡಿ ಕೆಕೆಆರ್ ಇನಿಂಗ್ಸ್ ನ ಬಲ ತುಂಬಿತು.
ಈ ಇಬ್ಬರು ಕೇವಲ 30 ಎಸೆತಗಳಲ್ಲಿ 58 ರನ್ ಗಳಿಸಿಕೊಂಡರು.
23 ಎಸೆತಗಳನ್ನು ಎದುರಿಸಿದ ಮಾರ್ಗನ್ 1 ಸಿಕ್ಸರ್ ಹಾಗೂ 3 ಬೌಂಡರಿ ಸಹಿತ 32 ರನ್ ಗಳಿಸಿ ಇನಿಂಗ್ಸ್ ನ ಕೊನೆಯ ಎಸೆತದಲ್ಲಿ ಔಟಾದರೆ, ಕೇವಲ 14 ಎಸೆತಗಳನ್ನು ಆಡಿದ ದಿನೇಶ್ ಕಾರ್ತಿಕ್ 2 ಸಿಕ್ಸರ್ ಮತ್ತು 2 ಬೌಂಡರಿ ಸಹಿತ ಅಜೇಯ 29 ರನ್ ಬಾರಿಸಿದರು.
PublicNext
18/10/2020 07:16 pm