ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

IPL 2020, DC vs CSK : ಡೆಲ್ಲಿಗೆ 180 ರನ್ಸ್ ಟಾರ್ಗೆಟ್

ಶಾರ್ಜಾ : ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 179 ರನ್ ಗಳಿಸಿ ಡೆಲ್ಲಿಗೆ 180 ರ ಗುರಿ ನೀಡಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಚೆನ್ನೈ ಆರಂಭದಲ್ಲೇ ಸ್ಯಾಮ್ ಕುರ್ರನ್(0) ವಿಕೆಟ್ ಕಳೆದುಕೊಂಡಿತು.

ಬಳಿಕ ಜೊತೆಯಾದ ಶೇನ್ ವಾಟ್ಸನ್ ಹಾಗೂ ಫಾಫ್ ಡುಪ್ಲೆಸಿಸ್ ನಿಧಾನಗತಿಯಲ್ಲಿ ಬ್ಯಾಟ್ ಬೀಸಿದರು.

ಈ ಜೋಡಿ 67 ಎಸೆತಗಳಲ್ಲಿ 87 ರನ್ ಗಳ ಕಾಣಿಕೆ ನೀಡಿತು.

ವಾಟ್ಸನ್ 28 ಎಸೆತಗಳಲ್ಲಿ 36 ರನ್ ಗೆ ಔಟ್ ಆದರು. ಡುಪ್ಲೆಸಿಸ್ 47 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್ ಬಾರಿಸಿ 58 ರನ್ ಗಳಿಸಿದರು. ಎಂ ಎಸ್ ಧೋನಿ 3 ರನ್ ಗೆ ಔಟ ಆದರು.

ಅಂಬಟಿ ರಾಯುಡು ಹಾಗೂ ರವೀಂದ್ರ ಜಡೇಜಾ ಜೋಡಿ 21 ಎಸೆತಗಳಲ್ಲಿ 50 ರನ್ ಗಳ ಜೊತೆಯಾಟವಾಡಿದೆ.

ರಾಯುಡು 25 ಎಸೆತಗಳಲ್ಲಿ 1 ಬೌಂಡರಿ, 4 ಸಿಕ್ಸರ್ ಬಾರಿಸಿ ಅಜೇಯ 45 ರನ್ ಚಚ್ಚಿದರೆ, ಜಡೇಜಾ 13 ಎಸೆತಗಳಲ್ಲಿ 4 ಸಿಕ್ಸರ್ ಸಿಡಿಸಿ ಅಜೇಯ 33 ರನ್ ಗಳಿಸಿದರು.

ಅಂತಿಮವಾಗಿ ಚೆನ್ನೈ 20 ಓವರ್ನಲ್ಲಿ 4 ವಿಕೆಟ್ ನಷ್ಟಕ್ಕೆ 179 ರನ್ ಗಳಿಸಿತು. ಡೆಲ್ಲಿ ಪರ ಅನ್ರಿಕ್ ನಾರ್ಟ್ಜೆ 2 ವಿಕೆಟ್ ಕಿತ್ತರೆ, ಕಗಿಸೊ ರಬಾಡ ಹಾಗೂ ತುಷಾರ್ ದೇಶಪಾಂಡೆ ತಲಾ 1 ವಿಕೆಟ್ ಪಡೆದರು.

Edited By : Nirmala Aralikatti
PublicNext

PublicNext

17/10/2020 09:23 pm

Cinque Terre

54.62 K

Cinque Terre

14