ದುಬೈ: ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ರಾಯಲ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 177 ರನ್ ಗಳಿಸಿದೆ.
ಇನಿಂಗ್ಸ್ ಆರಂಭಿಸಿದ ರಾಬಿನ್ ಉತ್ತಪ್ಪ ಮತ್ತು ಬೆನ್ ಸ್ಟೋಕ್ಸ್ ಜೋಡಿ ಉತ್ತಮ ಆರಂಭ ನೀಡಿದರು.
5.4 ಓವರ್ ಗಳಲ್ಲಿ 50 ರನ್ ಕಲೆಹಾಕಿತು. ಬೆನ್ ಸ್ಟೋಕ್ಸ್ 15 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ಒಂದು ಹಂತದಲ್ಲಿ ವಿಕೆಟ್ ನಷ್ಟವಿಲ್ಲದೆ 50 ರನ್ ಗಳಿಸಿಕೊಂಡಿದ್ದ ರಾಜಸ್ಥಾನ 69 ರನ್ ಗಳಿಸುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ರಾಬಿನ್ ಉತ್ತಪ್ಪ (42) ಮತ್ತು ಸಂಜು ಸ್ಯಾಮ್ಸನ್ (9) ತಂಡದ ಮೊತ್ತ 69 ರನ್ ಗಳಿದ್ದಾಗ ಔಟಾದರು.
ಈ ವೇಳೆ ಜೊತೆಯಾದ ಜಾಸ್ ಬಟ್ಲರ್ (24) ಮತ್ತು ನಾಯಕ ಸ್ಟೀವ್ ಸ್ಮಿತ್ ಜೋಡಿ ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 58 ರನ್ ಕೂಡಿಸಿತು.
ಕೊನೆಯವ ಓವರ್ ನಲ್ಲಿ ನಾಯಕ ಸ್ಮಿತ್ ಔಟಾದರು. ಅವರು ಕೇವಲ 36 ಎಸೆತಗಳಲ್ಲಿ 6 ಬೌಂಡರಿ ಮತ್ತು 1 ಸಿಕ್ಸರ್ ಸಹಿತ 57 ರನ್ ಬಾರಿಸಿದರು.
ಕೊನೆಯಲ್ಲಿ ಬಿರುಸಾಗಿ ಬ್ಯಾಟ್ ಬೀಸಿದ ರಾಹುಲ್ ತೆವಾಟಿಯಾ ಕೇವಲ 11 ಎಸೆತಗಳಲ್ಲಿ 19 ರನ್ ಬಾರಿಸಿದರು.
ಆರ್‌ಸಿಬಿಗೆ ಪರ ಕ್ರಿಸ್ ಮೋರಿಸ್ 4 ವಿಕೆಟ್ ಉರುಳಿಸಿದರೆ, ಯುಜುವೇಂದ್ರ ಚಾಹಲ್ 2 ವಿಕೆಟ್ ಪಡೆದುಕೊಂಡರು.
PublicNext
17/10/2020 05:26 pm