ಇಸ್ಲಾಮಾಬಾದ್: ಪಾಕಿಸ್ತಾನ ಕ್ರಿಕೆಟ್ ತಂಡದ ವೇಗದ ಬೌಲರ್ ಉಮರ್ ಗುಲ್ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.
36ರ ಹರೆಯದ ಉಮರ್ ಗುಲ್ ಪಾಕಿಸ್ತಾನದ ದೇಶಿಯ ಟಿ20 ಟೂರ್ನಿಯಲ್ಲಿ ದಕ್ಷಿಣ ಪಂಜಾಬ್ ತಂಡದ ಆಡುತ್ತಿದ್ದರು. ಆದರೆ ಶುಕ್ರವಾರ ಪಾಲ್ಗೊಂಡು ತಮ್ಮ ತಂಡ ಹೊರ ಬಿದ್ದ ಹಿನ್ನೆಲೆಯಲ್ಲಿ ವಿದಾಯವನ್ನು ಘೋಷಿಸಿದರು.
ಉಮರ್ ಗುಲ್ ಅವರು 2003ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆಯನ್ನು ಮಾಡಿದ್ದರು. ಅದರಲ್ಲೂ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಅದ್ಭುತ ಸಾಧನೆಯನ್ನು ಮಾಡಿದ್ದಾರೆ. 2007 ಟಿ20 ವಿಶ್ವಕಪ್ ಹಾಗೂ 2009ರ ಟಿ20 ವಿಶ್ವಕಪ್ ಎರಡರಲ್ಲೂ ಉಮರ್ ಗುಲ್ ಅತಿ ಹೆಚ್ಚಿನ ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
ಉಮರ್ ಗುಲ್ ಪಾಕಿಸ್ತಾನ ತಂಡದ ಪರ 47 ಟೆಸ್ಟ್ ಪಂದ್ಯಗಳನ್ನು ಆಡಿ 163 ವಿಕೆಟ್ ಪಡೆದುಕೊಂಡಿದ್ದಾರೆ. 130 ಏಕದಿನ ಪಂದ್ಯಗಳಲ್ಲಿ 179 ವಿಕೆಟ್ ಪಡೆದಿದ್ದರೆ, ಟಿ20 ಮಾದರಿಯಲ್ಲಿ 60 ಪಂದ್ಯಗಳನ್ನು ಆಡಿ 85 ವಿಕೆಟ್ ಕಿತ್ತಿದ್ದಾರೆ.
PublicNext
17/10/2020 12:53 pm