ಶಾರ್ಜಾ : ಇಂದು ಐಪಿಎಲ್ ನ 31ನೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೆ. ಎಲ್ ರಾಹುಲ್ ನಾಯಕತ್ವದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಗಳು ಮುಖಾಮುಖಿ ಆಗಲಿವೆ.
ಆರ್ ಸಿಬಿಗೆ ಇದು ಸೇಡಿನ ಪಂದ್ಯವಾದರೆ, ಪಂಬಾಜ್ ಪ್ಲೇ ಆಫ್ ಕನಸ್ಸಿನ ಮೇಟ್ಟಿಲು.
ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಆಡಿದ 7 ಪಂದ್ಯಗಳಲ್ಲಿ ಕೇವಲ 1 ಪಂದ್ಯವನ್ನಷ್ಟೆ ಗೆದ್ದಿದೆ.
ಆರ್ ಸಿಬಿ ಆಡಿದ 7 ಪಂದ್ಯಗಳ ಪೈಕಿ 5 ರಲ್ಲಿ ಜಯ ಸಾಧಿಸಿ 2 ಪಂದ್ಯಗಳನ್ನು ಸೋತಿದೆ.
ಪಂದ್ಯದಿಂದ ಪಂದ್ಯಕ್ಕೆ ಅತ್ಯುತ್ತಮ ನಿರ್ವಹಣೆ ತೋರಲು ಯಶಸ್ವಿಯಾಗುತ್ತಿರುವ ಆರ್ ಸಿಬಿ ತಂಡ, ಎದುರಾಳಿಗೆ ಕಂಟಕವಾಗಿ ಪರಿಣಮಿಸಿದೆ.
ಇನ್ನೂ ಆರ್ ಸಿಬಿಗೆ ಇದು ಸೇಡಿನ ಪಂದ್ಯ ಕೂಡ ಹೌದು. ಈ ಬಾರಿ ಆರ್ಸಿಬಿ ಎರಡು ಪಂದ್ಯಗಳಲ್ಲಿ ಸೋತಿರುವ ಪೈಕಿ ಪಂಜಾಬ್ ವಿರುದ್ಧವೂ ಒಂದು.
ಹೀಗಾಗಿ ಸೇಡು ತೀರಿಸಿಕೊಳ್ಳಲು ಕೊಹ್ಲಿ ಪಡೆ ಕಾತುರದಲ್ಲಿದೆ.
ಇತ್ತ ಸರ್ವಾಂಗೀಣ ಆಟವನ್ನು ಪ್ರದರ್ಶಿಸಲು ವಿಫಲವಾಗುತ್ತಿರುವ ಪಂಜಾಬ್ ತಂಡವು ಕೆಲವೊಂದು ನಿಕಟ ಪಂದ್ಯಗಳಲ್ಲಿಯೂ ಎಡವಿ ಸೋಲುತ್ತಿದೆ.
ಪರಿಣಾಮ ಪಂಜಾಬ್ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.
ಹೀಗಾಗಿ ಪ್ಲೇ ಆಫ್ ಕನಸು ಕಾಣುತ್ತಿರುವ ರಾಹುಲ್ ಪಡೆಗೆ ಈ ಪಂದ್ಯ ಮಾಡು ಇಲ್ಲವೇ ಮಡಿ ಎಂಬಂತಾಗಿದೆ.
ಒಟ್ಟಿನಲ್ಲಿ ರೋಚಕ ಪಂದ್ಯ ವಿಕ್ಷಿಸಲು ಅಭಿಮಾನಿಗಳಂತೂ ಕಾತುರರಾಗಿದ್ದಾರೆ.
PublicNext
15/10/2020 01:50 pm