ದುಬೈ: ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಹೈದರಾಬಾದ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 20 ರನ್‌ಗಳಿಂದ ಗೆದ್ದು ಬೀಗಿದೆ. ಆದರೆ ಪಂದ್ಯದಲ್ಲಿ ಚೆನ್ನೈ ನಾಯಕ ಎಂ.ಎಸ್.ಧೋನಿ ಗುಡುಗಿನ ಬೆನ್ನಲ್ಲೇ ಅಂಪೈರ್ ತೀರ್ಪು ಬದಲಿಸಿದ ವಿಡಿಯೋ ವೈರಲ್ ಆಗಿದೆ.
ಹೌದು. ಹೈದರಾಬಾದ್ ಇನ್ನಿಂಗ್ಸ್‌ನ 19ನೇ ಓವರಿನಲ್ಲಿ, ಸಿಎಸ್‌ಕೆ ವೇಗದ ಬೌಲರ್ ಶಾರ್ದುಲ್ ಠಾಕೂರ್ ವೈಡ್ ಗೆರೆಯ ಹೊರಗೆ ಯಾರ್ಕರ್ ಎಸೆದರು. ಅದನ್ನು ರಶೀದ್ ಖಾನ್ ತಪ್ಪಿಸಿಕೊಂಡರು. ಈ ವೇಳೆ ಅಂಪೈರ್ ವೈಡ್ ಎಂದು ತಿಳಿಸಲು ತಮ್ಮ ತೋಳುಗಳನ್ನು ಹಿಗ್ಗಿಸಲು ಹೊರಟಿದ್ದರು. ಆದರೆ ಸಿಎಸ್‌ಕೆ ನಾಯಕ ಎಂ.ಎಸ್. ಧೋನಿ ಮತ್ತು ಶಾರ್ದುಲ್ ಗುಡುಗಿದರು. ಆಗ ಅಂಪೈರ್ ತಮ್ಮ ತೀರ್ಪನ್ನು ಬದಲಿಸಿದರು.
PublicNext
14/10/2020 08:27 am