ದುಬೈ: ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ನ 29ನೇ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ತಂಡವು 20 ರನ್‌ಗಳಿಂದ ಗೆಲುವು ಸಾಧಿಸಿದೆ. ಈ ಮೂಲಕ ಟೂರ್ನಿಯಲ್ಲಿ ಮೂರನೇ ಜಯ ಸಾಧಿಸಿದೆ.
ಚೆನ್ನೈ ನೀಡಿದ್ದ 168 ರನ್ಗಳ ಗುರಿ ಬೆನ್ನಟ್ಟಿದ ಹೈದರಾಬಾದ್ ಆರಂಭದಲ್ಲೇ ಪ್ರಮುಖ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ನಾಯಕ ಡೇವಿಡ್ ವಾರ್ನರ್ ಕೇವಲ 9 ರನ್ಗೆ ಔಟ್ ಆದರೆ, ಮನೀಶ್ ಪಾಂಡೆ 4 ರನ್ ಗಳಿಸಿ ರನೌಟ್ಗೆ ಬಲಿಯಾದರು. ಕೇನ್ ವಿಲಿಯಮ್ಸನ್ ಜೊತೆಸೇರಿ ಇನ್ನಿಂಗ್ಸ್ ಕಟ್ಟಲು ಹೊರಟ ಜಾನಿ ಬೈರ್ಸ್ಟೋ(23) ಆಟಕ್ಕೆ ಜಡೇಜಾ ಬ್ರೇಕ್ ಹಾಕಿದರು. ಪ್ರಿಯಾಂ ಗರ್ಗ್(16) ಹಾಗೂ ವಿಜಯ್ ಶಂಕರ್(12) ಕೂಡ ಕೇನ್ಗೆ ಸಾತ್ ನೀಡಲಿಲ್ಲ. ಕೊನೆ ಹಂತದಲ್ಲಿ ಕೇನ್ ಕೂಡ 39 ಎಸೆತಗಳಲ್ಲಿ 7 ಬೌಂಡರಿ ಬಾರಿಸಿ 57 ರನ್ಗೆ ಬ್ಯಾಟ್ ಕೆಳಗಿಟ್ಟರು.
ಅಂತಿಮವಾಗಿ ಚೆನ್ನೈ ಬೌಲರ್ಗಳ ಉತ್ತಮ ಪ್ರದರ್ಶನದ ಫಲದಿಂದ ಹೈದರಾಬಾದ್ 20 ಓವರ್ನಲ್ಲಿ 8 ವಿಕೆಟ್ ನಷ್ಟಕ್ಕೆ 147 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲುಕಂಡಿತು. ಚೆನ್ನೈ ಪರ ಕರ್ಣ್ ಶರ್ಮಾ ಹಾಗೂ ಬ್ರಾವೋ 2, ಪಿಯೂಷ್ ಚಾವ್ಲಾ, ಸ್ಯಾಮ್ ಕುರ್ರನ್, ಜಡೇಜಾ ತಲಾ 1 ವಿಕೆಟ್ ಕಿತ್ತರು.
ಇದಕ್ಕೂ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಚೆನ್ನೈ ಪರ ಶೇನ್ ವಾಟ್ಸನ್ 42 ರನ್ ಹಾಗೂ ರಾಯುಡು 41 ರನ್ ಚಚ್ಚಿದರು. ಅಂತಿಮವಾಗಿ ಚೆನ್ನೈ 20 ಓವರ್ನಲ್ಲಿ 6 ವಿಕೆಟ್ ನಷ್ಟಕ್ಕೆ 167 ರನ್ ಗಳಿಸಿತ್ತು. ಹೈದರಾಬಾದ್ ಪರ ಸಂದೀಪ್ ಶರ್ಮಾ, ಖಲೀಲ್ ಅಹ್ಮದ್, ಹಾಗೂ ನಟರಾಜನ್ ತಲಾ 2 ವಿಕೆಟ್ ಪಡೆದಿದ್ದರು.
ಸಾಧನೆ: ಧೋನಿ ನೇತೃತ್ವದ ಚೆನ್ನೈ ತಂಡವು ಎಪಿಎಲ್‌ನಲ್ಲಿ ಸದ್ಯ ಇರುವ ಎಲ್ಲಾ ಏಳು ತಂಡಗಳ ವಿರುದ್ಧವೂ ಕನಿಷ್ಠ 10 ಪಂದ್ಯಗಳನ್ನು ಗೆದ್ದ ಮೈಲುಗಲ್ಲು ಬರೆದಿದೆ.
PublicNext
14/10/2020 07:26 am