ಶಾರ್ಜಾ: ಎಬಿ ಡಿವಿಲಿಯರ್ಸ್ ಅಬ್ಬರದ ಬ್ಯಾಟಿಂಗ್, ಕನ್ನಡಿಗ ದೇವದತ್ತ ಪಡಿಕ್ಕಲ್ ಹಾಗೂ ಆ್ಯರೋನ್ ಫಿಂಚ್ ಸ್ಫೋಟಕ ಆರಂಭದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ 195 ರನ್‌ಗಳ ಬೃಹತ್ ಮೊತ್ತದ ಗುರಿ ನೀಡಿದೆ.
ಶಾರ್ಜಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್ನ 28ನೇ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಕೊಹ್ಲಿ ಪಡೆ 2 ವಿಕೆಟ್ ನಷ್ಟಕ್ಕೆ 194 ರನ್‌ಗಳನ್ನು ಪೇರಿಸಿತು. ಆರ್‌ಸಿಬಿ ಪರ ಎಬಿ ಡಿವಿಲಿಯರ್ಸ್ ಅಜೇಯ 73 ರನ್ (33ಎಸೆತ, 5 ಬೌಂಡರಿ, 6 ಸಿಕ್ಸರ್), ಆ್ಯರೋನ್ ಫಿಂಚ್ 47 ರನ್ (37 ಎಸೆತ, 4 ಬೌಂಡರಿ, 1 ಸಿಕ್ಸ್), ದೇವದತ್ತ ಪಡಿಕ್ಕಲ್ 32 ರನ್ (23 ಎಸೆತ, 4 ಬೌಂಡರಿ, 1 ಸಿಕ್ಸ್), ವಿರಾಟ್ ಕೊಹ್ಲಿ ಅಜೇಯ 33 ರನ್ (28 ಎಸೆತ, 1 ಬೌಂಡರಿ) ಚಚ್ಚಿದರು.
ಟಾಸ್ ಗೆದ್ದು ಬ್ಯಾಟಿಂಗ್ಗೆ ಇಳಿದಿರುವ ಆರ್‌ಸಿಬಿ ಸ್ಫೋಟಕ ಆರಂಭ ಪಡೆದುಕೊಂಡಿತು. ಪವರ್ ಪ್ಲೇ ಅನ್ನು ಅತ್ಯುತ್ತಮವಾಗಿ ಉಪಯೋಗಿಸಿಕೊಂಡ ಓಪನರ್ಗಳಾದ ಫಿಂಚ್ ಹಾಗೂ ದೇವದತ್ ಪಡಿಕ್ಕಲ್ ಬಿರುಸಿನ ಬ್ಯಾಟಿಂಗ್ ನಡೆಸಿದರು. ಈ ಜೋಡಿ ಮೊದಲ 6 ಓವರ್ನಲ್ಲಿ 47 ರನ್ ಕಲೆಹಾಕಿತು. ಆದರೆ 8ನೇ ಓವರ್ನ ರಸೆಲ್ ಬೌಲಿಂಗ್ನಲ್ಲಿ 33 ರನ್ ಗಳಿಸಿದ್ದ ಪಡಿಕ್ಕಲ್ ವಿಕೆಟ್ ಒಪ್ಪಿಸಿದರು. ಈ ಬೆನ್ನಲ್ಲೆ 47 ರನ್ ಗಳಿಸಿದ್ದ ಫಿಂಚ್ ವಿಕೆಟ್ ಒಪ್ಪಿಸಿ ಪೆವಿಲಿಯನ್‌ಗೆ ತೆರಳಿದರು. ಕೊನೆಯಲ್ಲಿ ಎಬಿ ಡಿವಿಲಿಯರ್ಸ್ ಸಿಕ್ಸರ್, ಬೌಂಡರಿ ಸುರಿಮಳೆ ಸುರಿಸಿದರೆ, ವಿರಾಟ್ ಕೊಹ್ಲಿ ಸಾಥ್ ನೀಡಿದರು.
PublicNext
12/10/2020 09:16 pm