ನವದೆಹಲಿ: ಅಫ್ಘಾನಿಸ್ತಾನದ ಸ್ಟಾರ್ ಕ್ರಿಕೆಟಿಗ ರಶೀದ್ ಖಾನ್ ಇಂಡಿಯನ್ ಪ್ರೀಮಿಯರ್ ಲೀಗ್‌ನ 13ನೇ ಆವೃತ್ತಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಪರ ಅದ್ಭುತ ಬೌಲಿಂಗ್ ಮೂಲಕ ಮಿಂಚುತ್ತಿದ್ದಾರೆ. ಈ ಮಧ್ಯೆ ರಶೀದ್ ಖಾನ್ ಬೇರೆ ವಿಚಾರಕ್ಕೆ ಸುದ್ದಿಯಾಗಿದ್ದಾರೆ.
ಹೌದು. ಗೂಗಲ್‌ನಲ್ಲಿ ರಶೀದ್ ಖಾನ್ ಪತ್ನಿ ಯಾರೆಂದು ಸರ್ಚ್ ಮಾಡಿದರೆ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಎಂದು ತೋರಿಸುತ್ತಿದೆ. ನಿಮಗೆ ಡೌಟ್ ಇದ್ದರೆ ಒಂದು ಸಾರಿ ಚೆಕ್ ಮಾಡಿ ನೋಡಿ. ಅನುಷ್ಕಾ ಶರ್ಮಾ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪತ್ನಿ. ಹಾಗಿದ್ದರೂ ಯಾಕೆ ಹಾಗೆ ತೋರಿಸುತ್ತಿದ್ದೆ ನಿಮಗೆ ಗೊತ್ತಾ?
2018ರಲ್ಲಿ ಇನ್‌ಸ್ಟಾಗ್ರಾಮ್ ಚಾಟ್‌ನಲ್ಲಿ ನಿಮ್ಮ ನೆಚ್ಚಿನ ಬಾಲಿವುಟ್ ತಾರೆಯರು ಯಾರೆಂದು ರಶೀದ್ ಖಾನ್‌ಗೆ ಅಭಿಮಾನಿಗಳು ಪ್ರಶ್ನೆ ಕೇಳಿದ್ದರು. ಇದಕ್ಕೆ ಉತ್ತರಿಸಿದ್ದ ಅವರು, ಅನುಷ್ಕಾ ಶರ್ಮಾ ಹಾಗೂ ಪ್ರೀತಿ ಝಿಂಟಾ ಎಂದು ಹೇಳಿದ್ದರು. ಈ ರೀತಿ ಆಲ್‌ರೌಂಡರ್ ಹೇಳಿದ್ದರಿಂದ, ಅಂದಿನಿಂದ ಇಲ್ಲಿಯವರೆಗೂ ಈ ಫಲಿತಾಂಶ ಬರುತ್ತಿದೆ.
22 ವರ್ಷದ ರಶೀದ್ ಖಾನ್ ಅವರಿಗೆ ಮದುವೆಯಾಗಿಲ್ಲ. ಆದರೆ ಮದುವೆ ವಿಚಾರವನ್ನು ಸಂದರ್ಶನವೊಂದರಲ್ಲಿ ಈ ಹಿಂದೆ ಕೇಳಲಾಗಿತ್ತು. ಈ ವೇಳೆ ಉತ್ತರಿಸಿದ್ದ ಅವರು, ಅಫ್ಘಾನಿಸ್ತಾನ ಒಮ್ಮೆ ವಿಶ್ವಕಪ್ ಗೆದ್ದಾಗ, ನಿಶ್ಚಿತಾರ್ಥ ಮಾಡಿಕೊಂಡು ಮದುವೆಯಾಗುತ್ತೇನೆ ಎಂದು ಹೇಳಿದ್ದರು.
PublicNext
12/10/2020 07:18 pm