ಮುಂಬೈ: ಭಾರತದ ವಾಣಿಜ್ಯ ನಗರಿ ಮುಂಬೈನ ಮೆಟ್ರೋಪಾಲಿಟನ್ ಪ್ರದೇಶ (ಎಂಎಂಆರ್)ದಲ್ಲಿ ಇಂದು ಬೆಳಗ್ಗೆ 10 ಗಂಟೆಯಿಂದ ಸಂಪೂರ್ಣ ವಿದ್ಯುತ್ ಕಡಿತವಾಗಿದೆ. ಇದರಿಂದಾಗಿ ಜನ ಜೀವನ ಭಾರೀ ಕಷ್ಟವಾಗಿದೆ. ಈ ಮಧ್ಯೆ ಇಂಗ್ಲೆಂಡ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡದ ವೇಗದ ಬೌಲರ್ ಜೋಫ್ರಾ ಆರ್ಚರ್ ಅವರ ಹಳೆಯ ಟ್ವೀಟ್‌ಗಳು ವೈರಲ್ ಆಗಿವೆ.
ಮಾರ್ಚ್ 22, 2013 ರಂದು ಟ್ವೀಟ್ ಮಾಡಿದ್ದ ಆರ್ಚರ್, 'ಬೆಳಕು ಹೋಗಲಿದೆ' ಎಂದು ಹೇಳಿದ್ದರು. ಅಷ್ಟೇ ಅಲ್ಲದೆ 2014ರಲ್ಲಿ ಮತ್ತೆರಡು ಟ್ವೀಟ್ ಮಾಡಿ 'ಮುಂಬೈ ಅದಕ್ಕೆ ಅರ್ಹವಾಗಿದೆ'. 'ಮುಂಬೈನಲ್ಲಿ ಹೋದವು" ಮತ್ತು ಬರೆದುಕೊಂಡಿದ್ದಾರೆ. ಈ ಟ್ವೀಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
PublicNext
12/10/2020 02:49 pm