ಅಬುಧಾಬಿ: ವೀಕೆಂಡ್ ಧಮಾಕದ ಇಂದಿನ ಎರಡನೇ ಮ್ಯಾಚ್‌ನಲ್ಲಿ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಶಿಖರ್ ಧವನ್ ಅರ್ಧಶತಕ ಹಾಗೂ ನಾಯಕ ಶ್ರೇಯಸ್ ಅಯ್ಯರ್ ಮುಂಬೈ ಇಂಡಿಯನ್ಸ್ ತಂಡಕ್ಕೆ 163 ರನ್‌ಗಳ ಟಾರ್ಗೆಟ್ ನೀಡಿದೆ.
ಅಬುಧಾಬಿಯ ಶೇಖ್ ಝಾಯೆದ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಪಿಎಲ್ 27ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಶಿಖರ್ ಧವನ್ ಅಜೇಯ 69 ರನ್ (52 ಎಸೆತ, 6 ಬೌಂಡರಿ, 1 ಸಿಕ್ಸ್) ಹಾಗೂ ಶ್ರೇಯಸ್ ಅಯ್ಯರ್ 42 ರನ್ (33 ಎಸೆತ, 5 ಬೌಂಡರಿ) ಚಚ್ಚಿದರು. ಉಳಿದಂತೆ ಪೃಥ್ವಿ ಶಾ (4 ರನ್), ರಹಾನೆ (15 ರನ್), ಸ್ಟೋಯಿನಿಸ್ (13 ರನ್) ಹಾಗೂ ಅಲೆಕ್ಸ್ ಕ್ಯಾರಿ ಅಜೇಯ (14 ರನ್) ಗಳಿಸಿದರು. ಮುಂಬೈ ಪರ ಕೃನಾಲ್ ಪಾಂಡ್ಯ 4 ಓವರ್ಗಳಲ್ಲಿ 26 ರನ್ ನೀಡಿ 2 ವಿಕೆಟ್ ಪಡೆದು ಮಿಂಚಿದರು.
PublicNext
11/10/2020 09:32 pm