ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತೇವಾಟಿಯಾ, ಪರಾಗ್ ಸ್ಫೋಟಕ ಬ್ಯಾಟಿಂಗ್: ಹೈದರಾಬಾದ್ ವಿರುದ್ಧ ರಾಜಸ್ಥಾನ್‌ಗೆ ೫ ವಿಕೆಟ್‌ಗಳ ಗೆಲುವು

ದುಬೈ: ಕೊನೆಯಲ್ಲಿ ರಾಹುಲ್ ತೇವಾಟಿಯ ಹಾಗೂ ರಿಯಾನ್ ಪರಾಗ್ ಅಬ್ಬರದಿಂದ ರಾಜಸ್ಥಾನ್ ರಾಯಲ್ಸ್‌ ತಂಡವು ಸನ್​ರೈರ್ಸ್​ ಹೈದರಾಬಾದ್ ವಿರುದ್ಧ ೫ ವಿಕೆಟ್‌ಗಳಿಂದ ಗೆದ್ದು ಬೀಗಿದೆ.

ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್​ನ 26ನೇ ಪಂದ್ಯದಲ್ಲಿ ಮೊದಲು ಮೊದಲು ಬ್ಯಾಟಿಂಗ್ ಮಾಡಿ ಹೈದರಾಬಾದ್ ತಂಡ ಸವಾಲಿನ ಮೊತ್ತ ಕಲೆಹಾಕಿತ್ತು. ಮನೀಶ್ ಪಾಂಡೆ ಅವರ ಆಕರ್ಷಕ ಅರ್ಧಶತಕ ಹಾಗೂ ನಾಯಕ ಡೇವಿಡ್ ವಾರ್ನರ್ ಅವರ ಅತ್ಯುತ್ತಮ ಬ್ಯಾಟಿಂಗ್ ನೆರವಿನಿಂದ ಎಸ್​ಆರ್​ಎಚ್ ತಂಡ 158 ರನ್ ಗಳಿಸಿತ್ತು. ಬಳಿಕ ಗುರಿ ಬೆನ್ನಟ್ಟಿರುವ ರಾಜಸ್ಥಾನ್ ಆರಂಭದಲ್ಲೇ ಪ್ರಮುಖ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಪ್ರಮುಖ ಬ್ಯಾಟ್ಸ್​ಮನ್​ ಬೆನ್ ಸ್ಟೋಕ್ಸ್ ಕೇವಲ 5 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. ನಾಯಕ ಸ್ಟೀವ್ ಸ್ಮಿತ್ ಈ ಬಾರಿಯೂ ವಿಫಲರಾಗಿ ಕೇವಲ 5 ರನ್​ಗೆ ಔಟ್ ಆದರು. ಇದರ ಬೆನ್ನಲ್ಲೇ ಜಾಸ್ ಬಟ್ಲರ್(16) ಕೂಡ ಔಟ್ ಆಗಿ ಶಾಕ್ ನೀಡಿದರು.

ಈ ಸಂದರ್ಭ ಜೊತೆಯಾದ ರಾಬಿನ್ ಉತ್ತಪ್ಪ ಹಾಗೂ ಸಂಜು ಸ್ಯಾಮ್ಸನ್ ತಂಡವನ್ನು ಮೇಲೆತ್ತುವ ಪ್ರಯತ್ನ ನಡೆಸಿದರು. ಆದರೆ ಸ್ಯಾಮ್ಸನ್​ಗೆ ಉತ್ತಪ್ಪ ಸಾತ್ ನೀಡಲಿಲ್ಲ. ಉತ್ತಪ್ಪ 18 ರನ್​ಗೆ ಔಟ್ ಆಗುವ ಮೂಲಕ 37 ರನ್​ಗಳ ಜೊತೆಯಾಟಕ್ಕೆ ಬ್ರೇಕ್ ಬಿತ್ತು. ಸ್ಯಾಮ್ಸನ್ ಕೂಡ 25 ಎಸೆತಗಳಲ್ಲಿ 26 ರನ್ ಗಳಿಸಿ ನಿರ್ಗಮಿಸಿದರು. ಕೊನೆಯಲ್ಲಿ ರಾಹುಲ್ ತೇವಾಟಿಯ ಅಜೇಯ 45 ರನ್ (28 ರನ್, 4 ಬೌಂಡರಿ, 2 ಸಿಕ್ಸರ್) ಹಾಗೂ ರಿಯಾನ್ ಪರಾಗ್ ಅಜೇಯ 42 ರನ್ (26 ಎಸೆತ, 2 ಬೌಂಡರಿ, 2 ಸಿಕ್ಸರ್) ಸ್ಫೋಟಕ ಬ್ಯಾಟಿಂಗ್‌ನಿಂದ ತಂಡಕ್ಕೆ ಗೆಲುವು ತಂದುಕೊಟ್ಟರು.

ಇದಕ್ಕೂ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್​ ಮಾಡಿದ್ದ ಹೈದರಾಬಾದ್ ತಂಡವು ಮೊದಲ 4 ಓವರ್​ನಲ್ಲಿ ಕೇವಲ 13 ರನ್ ಗಳಿಸಿತಷ್ಟೆ. ಅಂತಿಮವಾಗಿ ಹೈದರಾಬಾದ್ 20 ಓವರ್​ನಲ್ಲಿ 4 ವಿಕೆಟ್ ನಷ್ಟಕ್ಕೆ 158 ರನ್ ಗಳಿಸಿತ್ತು.

Edited By : Vijay Kumar
PublicNext

PublicNext

11/10/2020 07:33 pm

Cinque Terre

83.86 K

Cinque Terre

0

ಸಂಬಂಧಿತ ಸುದ್ದಿ