ಐಪಿಎಲ್ ನ 25 ನೇ ಪಂದ್ಯದಲ್ಲಿ ಚೆನ್ನೈ ವಿರುದ್ಧ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಕೊಹ್ಲಿ ನೇತೃತ್ವದ ಆರ್ ಸಿಬಿ ತಂಡ 20 ಓವರ್ ನಲ್ಲಿ 4 ವಿಕೆಟ್ ನಷ್ಟಕ್ಕೆ 169 ರನ್ ಗಳಿಸಿ ಸಿಎಸ್ ಕೆಗೆ 170 ರ ಟಾರ್ಗೆಟ್ ಕೊಟ್ಟಿದೆ.
ಆರಂಭಿಕ ಆಟಗಾರ ಆರೋನ್ ಫಿಂಚ್ ಕೇವಲ 2 ರನ್ ಗಳಿಸಿ ಔಟ್ ಆದರು. ಆದರೆ ಮತ್ತೊಬ್ಬ ಓಪ್ನರ್ ದೇವದತ್ತ ಪಡಿಕಲ್ ತಂಡಕ್ಕೆ ಸ್ವಲ್ಪ ಆಸರೆಯಾಗಿ, 34 ಬಾಲ್ ಗಳನ್ನ ಎದುರಿಸಿ ಒಂದು ಸಿಕ್ಸ್, ಎರಡು ಫೋರ್ಗಳನ್ನ ಬಾರಿಸಿ 33 ರನ್ ಗಳ ನೀಡಿದರು.
ಇನ್ನು ಎಬಿಡಿ ಸೊನ್ನೆ ಸುತ್ತಿದ್ರೆ, ವಾಷಿಂಗ್ಟನ್ ಸುಂದರ್ 10 ರನ್ ಗಳನ್ನ ಗಳಿಸಿ ಪೇವಿಲಿಯನ್ ಗೆ ತೆರಳಿದರು.
ನಾಯಕ ವಿರಾಟ್ ಕೊಹ್ಲಿ 52 ಎಸೆತಗಳನ್ನ ಎದುರಿಸಿ 90 ರನ್ ಗಳಿಸಿದರು.
ನಾಲ್ಕು ಸಿಕ್ಸರ್ ಹಾಗೂ ನಾಲ್ಕು ಬೌಂಡರಿಗಳನ್ನ ಬಾರಿಸಿದರು. ಶಿವಂ ದುಬೆ 22 ರನ್ ಗಳನ್ನ ಗಳಿಸಿದರು.
PublicNext
10/10/2020 09:32 pm