ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

CSK ಸೋಲು : ಧೋನಿ ಮಗಳು ಝಿವಾ ರೇಪ್ ಬೆದರಿಕೆ..!

ಭಾರತದಲ್ಲಿ ಕ್ರಿಕೆಟ್ ಅತ್ಯಂತ ಜನಪ್ರಿಯ ಕ್ರೀಡೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಹಾಗೆಯೇ ಕ್ರಿಕೆಟಿಗರನ್ನು ಪ್ರಾಣಕ್ಕಿಂತಲೂ ಹೆಚ್ಚಾಗಿ ಪ್ರೀತಿಸುವ ಅಭಿಮಾನಿಗಳಿದ್ದಾರೆ.

ಹೀಗಾಗಿಯೇ ಪ್ರಮುಖ ಟೂರ್ನಿಗಳಲ್ಲಿ ಭಾರತ ಸೋತಾಗ ಗಳಗಳನೆ ಅಳುವವರು ಜೊತೆಗೆ ಕೋಪದ ಕೈಗೆ ಬುದ್ದಿ ಕೊಟ್ಟು ಕ್ರೀಡಾಪಟುಗಳ ಮನೆಗಳ ಮೇಲೆ ಕಲ್ಲೆಸೆಯುವ ಅಹಿತಕರ ಘಟನೆಗಳು ನಡೆಯುತ್ತಿರುತ್ತವೆ.

ಆದರೆ ಇವೆಲ್ಲವನ್ನೂ ಮೀರಿ ಇದೀಗ ತುಂಬಾ ನೀಚ ಘಟನೆಯೊಂದು ಬೆಳಕಿಗೆ ಬಂದಿದೆ.

ಹೌದು ಸಿಎಸ್ ಕೆ ಚೆನ್ನಾಗಿ ಆಡಿಲ್ಲವೆಂದು ಧೋನಿ ಮಗಳಿಗೆ ಅತ್ಯಾಚಾರದ ಬೆದರಿಕೆ ಹಾಕಿರುವ ಹೇಯ ಘಟನೆಯೊಂದು ಬೆಳಕಿಗೆ ಬಂದಿದೆ.

ಬುಧವಾರ ಶೇಖ್ ಝಾಯೆದ್ ಕ್ರೀಡಾಂಗಣದಲ್ಲಿ ನಡೆದ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಣ ಪಂದ್ಯದಲ್ಲಿ ಸಿಎಸ್ ಕೆ 10 ರನ್ ಗಳಿಂದ ಪರಾಜಯಗೊಂಡಿತು.

ಈ ಪಂದ್ಯದಲ್ಲಿ ವಿಫಲರಾದ ಸಿಎಸ್ ಕೆ ಮಹೇಂದ್ರ ಸಿಂಗ್ ಧೋನಿ ಮತ್ತು ಕೇದಾರ್ ಜಾಧವ್ ಸಾಮಾಜಿಕ ತಾಣದಲ್ಲಿ ಟ್ರೋಲ್ ಆಗಿದ್ದರು.

ಆದರೆ ಅದೆಲ್ಲವನ್ನೂ ಮೀರಿ ಇದೀಗ ಆಟಗಾರರ ಮೇಲಿನ ಈ ನಿಂದನೆ - ವಿಡಂಬನೆಯನ್ನು ದಾಟಿ ಅವರ ಮಕ್ಕಳ ವಿರುದ್ದ ಬೆದರಿಕೆಯೊಡ್ಡಿರುವ ಘಟನೆ ಜರುಗಿದೆ.

ಸತತ ವಿಫಲರಾಗುತ್ತಿರುವ ಧೋನಿಯನ್ನು ಟೀಕಿಸಿ ಹಲವರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು.

ಇದರ ನಡುವೆ ಮಿಸ್ಟರ್ ವಿಜಯ್ ಎಂಬ ಹೆಸರಿನ ವ್ಯಕ್ತಿಯೊಬ್ಬರು ಧೋನಿ ಮಗಳು ಝೀವಳನ್ನು ರೇಪ್ ಮಾಡುವುದಾಗಿ ಬೆದರಿಕೆಯೊಡ್ಡಿದ್ದಾನೆ.

ಅಷ್ಟೇ ಅಲ್ಲದೆ ಧೋನಿ ಮಗಳ ಹೆಸರನ್ನು ಬಳಸಿ ಅಶ್ಲೀಲ ಕಮೆಂಟ್ ಮೂಲಕ ಸೋಷಿಯಲ್ ಮೀಡಿಯಾ ವಿಕೃತರು ಹೌಹಾರಿದ್ದಾರೆ.

ಈ ಚಾಟ್ ಗಳ ಸ್ಕ್ರೀನ್ ಶಾಟ್, ಹಾಗೂ ಕಮೆಂಟ್ ಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಹಲವರು ಇಂತಹ ನೀಚ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದು ಅಂಧಾಭಿಮಾನದ ಮತ್ತೊಂದು ಮಜಲು ಎಂದಿರುವ ಇನ್ನೂ ಕೆಲವರು, ಕ್ರಿಕೆಟಿಗರ ಮನೆಗೆ ಕಲ್ಲೆಸೆಯುವ ಪ್ರವೃತ್ತಿಯ ಮುಂದುವರೆದ ಭಾಗ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

Edited By : Nirmala Aralikatti
PublicNext

PublicNext

09/10/2020 09:48 pm

Cinque Terre

100.36 K

Cinque Terre

11

ಸಂಬಂಧಿತ ಸುದ್ದಿ